ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಹಲವು ನಾಯಕರಿಗೆ ಸಚಿವ ಸ್ಥಾನ ಕೈತಪ್ಪಿದ್ದು, ಶಾಸಕರ ಬೆಂಬಲಿಗರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರಾದ ರಾಜೂಗೌಡ, ನೆಹರು ಓಲೇಕಾರ್, ಹಾಲಾಡಿ, ಎಸ್.ಎ.ರಾಮದಾಸ್ ಸೇರಿದಂತೆ ಹಲವರು ಈ ಬಾರಿ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಗುವ ಬಗ್ಗೆ ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ ನಿರೀಕ್ಷೆ ಹುಸಿಯಾಗಿದ್ದು, ಸಚಿವ ಸ್ಥಾನ ಕೈತಪ್ಪಿದೆ. ಇದರಿಂದ ರೊಚ್ಚಿಗೆದ್ದಿರುವ ಶಾಸಕರ ಬೆಂಬಲಿಗರು ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಿವಾಸಿ ಭಾರತೀಯನಿಗೂ ಸಿಗಲಿದೆ ‘ಆಧಾರ್’ ಕಾರ್ಡ್
ಹಾವೇರಿಯಲ್ಲಿ ನೆಹರು ಓಲೇಕಾರ್ ಬೆಂಬಲಿಗರು ಬೀದಿಗಿಳಿದು ಹೋರಾಟ ನಡೆಸಿದ್ದರೆ, ಇತ್ತ ಬೆಂಗಳೂರಿಗೆ ಧಾವಿಸಿರುವ ರಾಜೂಗೌಡ ಬೆಂಬಲಿಗರು ಶಾಸಕರ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದು, ಸುರಪುರದ ಜನರಿಗೆ ಬಿಜೆಪಿ ಅನ್ಯಾಯವೆಸಗುತ್ತಿದೆ ಎಂದು ರಸ್ತೆಗಳಲ್ಲಿ ಕುಳಿತು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.