
ಬೆಂಗಳೂರು: ಎಂಇಎಸ್ ಕಾರ್ಯಕರ್ತರು ಪವಿತ್ರ ಕೇದಾರನಾಥ ಯಾತ್ರಾ ಸ್ಥಳದಲ್ಲಿ ನಾಡದ್ರೋಹಿ ಘೋಷಣೆ ಕೂಗಿ ಪುಂಡಾಟ ಮೆರೆದಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ಯುವಕರು ನಾಡದ್ರೋಹಿ ಘೋಷಣೆಗಳನ್ನು ಕೂಗಿದ್ದಾರೆ.
ಕೇದಾರನಾಥ ಪ್ರವಾಸ ಕೈಗೊಂಡಿದ್ದ ಇಲ್ಲಿನ ಐವರು ಯುವಕರು ಭಗವಾ ಧ್ವಜ ಹಿಡಿದು ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋವನ್ನು ಎಂಇಎಸ್ ಯುವ ಘಟಕ ತನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದೆ.