ಡಿಎ ಮತ್ತು ಡಿಆರ್ (ಡಿಯರ್‌ನೆಸ್ ರಿಲೀಫ್) ಹೆಚ್ಚಳದ ನಂತರ 18 ತಿಂಗಳ ಬಾಕಿ ಇರುವ ತುಟ್ಟಿಭತ್ಯೆ ಪಾವತಿಗೆ ಸಂಬಂಧಿಸಿದ ಸಮಸ್ಯೆ ಉದ್ಭವವಾಗಿದೆ. ಕೇಂದ್ರ ಸರ್ಕಾರಿ ನೌಕರರು ತಮ್ಮ ಖಾತೆಯಲ್ಲಿ ಬಾಕಿ ಇರುವ ಮೊತ್ತ ಪಡೆಯುವುದು ಹೇಗೆ ಎಂಬ ಆತಂಕದಲ್ಲಿದ್ದಾರೆ.
ಯಾಕಂದ್ರೆ ಡಿಎ ಬಾಕಿಯನ್ನು 3 ಕಂತುಗಳಲ್ಲಿ ನೀಡಬಹುದು ಎನ್ನಲಾಗ್ತಾ ಇದೆ. ಜನವರಿ 2020ರಿಂದ ಜೂನ್ 2021 ರವರೆಗಿನ 18 ತಿಂಗಳ ಡಿಎ ಬಾಕಿ ಪಾವತಿಗೆ ಸಂಬಂಧಿಸಿದ ವಿಷಯವು ಕ್ಯಾಬಿನೆಟ್ ಚರ್ಚೆಯ ನಿರೀಕ್ಷೆಯಲ್ಲಿದೆ. ಹಂತ-3ರಲ್ಲಿನ ನೌಕರರ ಡಿಎ ಬಾಕಿ 11,880 ರೂಪಾಯಿಯಿಂದ 37,554 ರೂಪಾಯಿ ನಡುವೆ ಇದೆ.
ಹಂತ-13 ಅಥವಾ ಹಂತ-14ಕ್ಕೆ ಉದ್ಯೋಗಿಗಳ ಬಾಕಿ 1,44,200 ರೂಪಾಯಿಯಿಂದ 2,18,200 ರೂಪಾಯಿ ನಡುವೆ ಇರುತ್ತದೆ. ಆದಾಗ್ಯೂ, ಸರ್ಕಾರದೊಂದಿಗಿನ ಮುಂದಿನ ಮಾತುಕತೆಗಳ ನಂತರ ಈ ಅಂಕಿ ಅಂಶಗಳು ಬದಲಾಗಬಹುದು.
ಸರ್ಕಾರವು ತುಟ್ಟಿಭತ್ಯೆಯನ್ನು ಶೇ.4 ರಿಂದ ಶೇ.38 ಕ್ಕೆ ಹೆಚ್ಚಿಸಿದೆ. ಕೇಂದ್ರ ಸಚಿವ ಸಂಪುಟವು ಸೆಪ್ಟೆಂಬರ್ 28ರಂದು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ 12 ಮಾಸಿಕ ಸರಾಸರಿಯಲ್ಲಿನ ಶೇಕಡಾವಾರು ಹೆಚ್ಚಳದ ಆಧಾರದ ಮೇಲೆ 01.07.2022 ರಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆಯ ಹೆಚ್ಚುವರಿ ಕಂತು 4 ಪ್ರತಿಶತದ ಬಿಡುಗಡೆಗೆ ಅನುಮೋದನೆ ನೀಡಿತ್ತು. ಆದರೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಕ್ರಮವಾಗಿ ಹೆಚ್ಚಿನ ಮೊತ್ತದ ಡಿಎ ಮತ್ತು ಡಿಆರ್ ಗೆ ಅರ್ಹರಾಗುತ್ತಾರೆ.
ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯ ಈ ಹೆಚ್ಚಳದ ಖಾತೆಯಲ್ಲಿ ಹೆಚ್ಚುವರಿ ಆರ್ಥಿಕ ಪರಿಣಾಮಗಳನ್ನು ವಾರ್ಷಿಕವಾಗಿ 6,591.36 ಕೋಟಿ ಎಂದು ಅಂದಾಜಿಸಲಾಗಿದೆ. 2022-23ರ ಆರ್ಥಿಕ ವರ್ಷದಲ್ಲಿ 4,394.24 ಕೋಟಿ ರೂಪಾಯಿಯನ್ನು ಪಿಂಚಣಿದಾರರಿಗೆ ಡಿಯರ್‌ನೆಸ್ ರಿಲೀಫ್‌ಗಾಗಿ ಮೀಸಲಿಡಲಾಗಿದೆ.
ಈ ಹೆಚ್ಚಳದ ಖಾತೆಯಲ್ಲಿ ಹೆಚ್ಚುವರಿ ಆರ್ಥಿಕ ಪರಿಣಾಮಗಳನ್ನು ವಾರ್ಷಿಕ 6,261.20 ಕೋಟಿ ಎಂದು ಅಂದಾಜಿಸಲಾಗಿದೆ. 2022-23 ಹಣಕಾಸು ವರ್ಷದಲ್ಲಿ 4,174.12 ಕೋಟಿ ಎಂದು ಅಂದಾಜಿಸಲಾಗಿದೆ. ಡಿಎ ಮತ್ತು ಡಿಆರ್ ಕಾರಣದಿಂದ ಬೊಕ್ಕಸಕ್ಕೆ ಸಂಯೋಜಿತ ಕೊಡುಗೆ ವಾರ್ಷಿಕ 12,852.56 ಕೋಟಿ ರೂಪಾಯಿ. 2022-23ರ ಹಣಕಾಸು ವರ್ಷದಲ್ಲಿ 8,568.36 ಕೋಟಿ ರೂಪಾಯಿ ಅಂದಾಜಿಸಲಾಗಿದೆ.