ಮುಂಬೈ: ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಾರಾಯಣ ರಾಣೆ ವಿರುದ್ಧ ಮಹರಾಷ್ಟ್ರ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ನಾರಾಯಣ ರಾಣೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಅಲ್ಲದೇ ದೇಶದ ಸ್ವಾತಂತ್ರ್ಯದ ಬಗ್ಗೆ ಉದ್ಧವ್ ಠಾಕ್ರೆಗೆ ಅಜ್ಞಾನ ಎಂದು ಕಿಡಿಕಾರಿದ್ದಾರೆ ಎಂದು ಆರೋಪಿಸಿ ಶಿವಸೇನೆ ಘಟಕವಾದ ಯುವ ಸೇನಾ ಪೊಲೀಸರಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಪುಣೆಯ ಚತುರ್ ಶೃಂಗಿ ಹಾಗೂ ನಾಸಿಕ್ ನಲ್ಲಿ ಠಾಣೆಗಳಲ್ಲಿ ರಾಣೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಪ್ಲಾಸ್ಟಿಕ್ ಪ್ಯಾಕೆಟ್ನಲ್ಲಿ ಸಿಕ್ಕಿ ಹಾಕಿಕೊಂಡು ಪರದಾಡಿದ ಮೈನಾ ಹಕ್ಕಿ
ನಾರಾಯಣ ರಾಣೆ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 153 ಹಾಗೂ 505ರ ಅಡಿ ಪ್ರಕರಣ ದಾಖಲಾಗಿದೆ.