alex Certify BIG NEWS: ಕೇಂದ್ರ ಸಂಪುಟ ಪುನಾರಚನೆ; ಕಾರ್ಯನಿರ್ವಹಣೆ ಮಾನದಂಡದ ಪ್ರಕಾರ ಪ್ರಧಾನಿ ಮೋದಿ ರಾಜೀನಾಮೆ ಕೊಡಬೇಕು; ಸಿದ್ದರಾಮಯ್ಯ ವಿಶ್ಲೇಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೇಂದ್ರ ಸಂಪುಟ ಪುನಾರಚನೆ; ಕಾರ್ಯನಿರ್ವಹಣೆ ಮಾನದಂಡದ ಪ್ರಕಾರ ಪ್ರಧಾನಿ ಮೋದಿ ರಾಜೀನಾಮೆ ಕೊಡಬೇಕು; ಸಿದ್ದರಾಮಯ್ಯ ವಿಶ್ಲೇಷಣೆ

ಬೆಂಗಳೂರು: ಕೇಂದ್ರ ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರ ಕಾರ್ಯನಿರ್ವಹಣೆಯೇ ಮಾನದಂಡವಾಗಿ ಪರಿಗಣಿಸಿದ್ದರೆ ಮೊದಲು ಪ್ರಧಾನಿ ಮೋದಿ ರಾಜೀನಾಮೆ ಪಡೆಯಬೇಕಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು ಎಂದು ಹೇಳಿದ್ದಾರೆ.

ನೋಟ್ ಬ್ಯಾನ್ ನಿಂದ ಹಿಡಿದು ಕೊರೊನಾ ನಿಯಂತ್ರಣದವರೆಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಣಕಾಸು, ಆರೋಗ್ಯ, ಶಿಕ್ಷಣ ಖಾತೆಗಳ ವೈಫಲ್ಯಕ್ಕೆ ಮೋದಿಯೇ ಕಾರಣ. ಏಕವ್ಯಕ್ತಿ ಪ್ರದರ್ಶನವಾಗಿರುವ ಕೇಂದ್ರ ಸರ್ಕಾರದಲ್ಲಿ ಸಂಪುಟ ವಿಸ್ತರಣೆಗೆ ಮಹತ್ವವೇ ಇಲ್ಲ. ಸಚಿವರಾದವರು ನಾಮ್ ಕಾವಾಸ್ತೆ. ಪ್ರತಿಯೊಂದು ಇಲಾಖೆ ನಿರ್ವಹಣೆ, ನೀತಿ ನಿರ್ಧಾರಗಳನ್ನು ಕೈಗೊಳ್ಳುವುದು ನರೇಂದ್ರ ಮೋದಿಯವರೆ ಎಂದು ವಾಗ್ದಾಳಿ ನಡೆಸಿದ್ದಾರೆ.

BIG NEWS: KRSಗೆ ಇನ್ನೂ 100 ವರ್ಷ ಏನೂ ಆಗಲ್ಲ; ಅಕ್ರಮ ಗಣಿಗಾರಿಕೆ ಬಂದ್ ಮಾಡಿಸಿದ್ದೇ ನಾನು; ಸುಮಲತಾಗೆ ಮತ್ತೆ ತಿರುಗೇಟು ನೀಡಿದ HDK

ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಸಚಿವರನ್ನು ಬದಿಗೊತ್ತಿ ನಿರ್ಧಾರಗಳನ್ನು ಕೈಗೊಂಡರು. ಜಾಗಟೆ ಬಡಿದು, ದೀಪ ಹಚ್ಚಿ, ಕೊರೊನಾ ಓಡಿಸಲು ಕರೆ ಕೊಟ್ಟಿದ್ದು ಮೋದಿಯವರು. ಈಗ ಕೊರೊನಾ ನಿಯಂತ್ರಣ ವೈಫಲ್ಯ ಕಾರಣ ಕೊಟ್ಟು ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರನ್ನು ಕಿತ್ತುಹಾಕಿದ್ದಾರೆ. ಇಲ್ಲಿ ನಿಜವಾಗಿ ರಾಜೀನಾಮೆ ಕೊಡಬೇಕಾಗಿದ್ದು ಪ್ರಧಾನಿ ಮೋದಿಯವರು.

ಇನ್ನು ಸಚಿವರ ಸಾಧನೆ ಮಾನದಂಡವಾಗಿದ್ದರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ತೆಗೆದುಹಾಕಬೇಕು. ಆರೋಗ್ಯ ಕ್ಷೇತ್ರಕ್ಕಿಂತ ಹೆಚ್ಚು ವೈಫಲ್ಯ ಆಗಿರುವುದು ಆರ್ಥಿಕ ಕ್ಷೇತ್ರ. ಇಡೀ ದೇಶದ ಆರ್ಥಿಕ ವಲಯವೇ ದುಸ್ಥಿತಿಗೆ ಬರಲು ಕಾರಣರಾಗುವಂತೆ ಮಾಡಿದವರು ವಿತ್ತ ಸಚಿವರು. ಆದರೂ ಯಾಕೆ ಅವರನ್ನು ಕಿತ್ತುಹಾಕಿಲ್ಲ? 43 ಹೊಸ ಸಚಿವರಲ್ಲಿ ಬಹುತೇಕರು ಹೊಸಬರು. ಅಸಮರ್ಥರು ಅಸಮರ್ಥರನ್ನೇ ಆಯ್ಕೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...