ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೂಡಲಸಂಗಮ ಕ್ಷೇತ್ರ ಭೇಟಿ ರದ್ದಾಗಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮ ಕ್ಷೇತ್ರಕ್ಕೆ ತೆರಳಬೇಕಿದ್ದ ಅಮಿತ್ ಶಾ, ಕೊನೇ ಗಳಿಗೆಯಲ್ಲಿ ಕೂಡಲಸಂಗಮ ಭೇಟಿ ರದ್ದುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ರೋಡ್ ಶೋ, ಅಬ್ಬರದ ಪ್ರಚಾರ ನಡೆಸಿದ ಅಮಿತ್ ಶಾ, ಬಳಿಕ ಅಲ್ಲಿಂದ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮಕ್ಕೆ ತೆರಳಬೇಕಿತ್ತು. ಆದರೆ ಕೂಡಲಸಂಗಮಕ್ಕೆ ತೆರಳದೇ ನೇರವಾಗಿ ಇಳಕಲ್ ಗೆ ಅಮಿತ್ ಶಾ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.