ಮೈಸೂರು: ಅಕ್ರಮ ಗಣಿಗಾರಿಕೆಯಿಂದಾಗಿ ಕೆ.ಆರ್.ಎಸ್.ಡ್ಯಾಂಗೆ ಹಾನಿಯಾಗಿದೆ. ನನ್ನ ಹೇಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಂಸದೆ ಸುಮಲತಾ ತಿಳಿಸಿದ್ದಾರೆ.
ಕೆ.ಆರ್.ಎಸ್.ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಸುಮಲತಾ, ಅಕ್ರಮ ಗಣಿಗಾರಿಕೆಯಿಂದ ಡ್ಯಾಂಗೆ ಹಾನಿಯಾಗುತ್ತಿದೆ. ನನ್ನ ಹೇಳಿಕೆಗೆ ನಾನು ಬದ್ಧ. ಸಣ್ಣಪುಟ್ಟ ಬಿರುಕು ಬಿಟ್ಟಿತ್ತು. ಅದನ್ನು ಗ್ರೌಟಿಂಗ್ ಬಳಸಿ ರೀಫಿಲ್ ಮಾಡಲಾಗಿದೆ. ಅಕ್ರಮ ಗಣಿಗಾರಿಕೆಯಿಂದ ಡ್ಯಾಂಗೆ ಆಗುತ್ತಿರುವ ಇಂತಹ ಹಾನಿ ತಪ್ಪಿಸಬೇಕಿದೆ ಎಂದು ಹೇಳಿದರು.
ವರದಕ್ಷಿಣೆ ಪಿಡುಗಿನ ವಿರುದ್ಧ ಕೇರಳ ರಾಜ್ಯಪಾಲರಿಂದ ಉಪವಾಸ ಸತ್ಯಾಗ್ರಹ
ಈ ಹಿಂದೆ ತಜ್ಞರ ದಾಖಲೆ ಆಧಾರಾದಲ್ಲೇ ನಾನು ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದೆ. ಅಕ್ರಮ ಗಣಿಗಾರಿಕೆಯಿಂದ ಕೆ.ಆರ್.ಎಸ್. ನಲ್ಲಿ ಬಿರುಕು ಬಿಟ್ಟಿದ್ಯಾ? ಎಂದು ಕೇಳಿದ್ದೆ. ಸಣ್ಣಪುಟ್ಟ ಬಿರುಕು ಬಿಟ್ಟಿತ್ತು ಅದನ್ನು ಮುಚ್ಚಲಾಗಿದೆ. ನನ್ನ ಹೇಳಿಕೆಗಳನ್ನು ತಿರುಚುವುದು ತಪ್ಪು. ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ನನ್ನ ಹೋರಾಟದ ದಾರಿ ತಪ್ಪಿಸುವ ಯತ್ನ ನಡೆದಿದೆ ಎಂದು ಹೇಳಿದರು.