ಬೆಂಗಳೂರು: ರ್ಯಾಪಿಡೋ ಬೈಕ್, ಅನಧಿಕೃತ ಟ್ಯಾಕ್ಸಿಗಳನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಆಟೋ ಚಾಲರು ಮುಷ್ಕರ ಆರಂಭಿಸಿದ್ದು, ಕೆಲವೇ ಹೊತ್ತಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಆಟೋ ಚಾಲಕರು ಎಚ್ಚರಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಆಟೋ ಚಾಲಕರು ಮುಷ್ಕರ ಆರಂಭಿಸಿದ್ದು, ಮೆಜೆಸ್ಟಿಕ್ ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿ ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಆದರ್ಶ್ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
ಮುಷ್ಕರದ ಬಗ್ಗೆ ಕೆಲ ಆಟೋ ಚಾಲಕರಿಗೆ ಮಾಹಿತಿ ಇಲ್ಲ, ಇನ್ನು ಕೆಲವರು ಪರೀಕ್ಷೆ, ಆಸ್ಪತ್ರೆಗೆ ಹೋಗುವವರಿಗೆ ಸೇವೆ ಒದಗಿಸುತ್ತಿದ್ದಾರೆ. 11 ಗಂಟೆಗೆ ಎಲ್ಲಾ ಆಟೋ ಚಾಲಕರು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಆಗಮಿಸಲಿದ್ದು, ಎಲ್ಲರೂ ಸೇರಿ ಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ. ತಕ್ಷಣ ರ್ಯಾಪಿಡೋ ಬೈಕ್, ಅನಧಿಕೃತ ಟ್ಯಾಕ್ಸಿ ಗಳನ್ನು ಸರ್ಕಾರ ನಿಷೇಧ ಮಾಡಬೇಕು ಎಂದು ಆಗ್ರಹಿಸಿದ್ದಾರೆ.