alex Certify BIG NEWS: ಕೆಲವರು ಸೂಟು ಹೊಲಿಸಿ ಸಿಎಂ ಕನಸು ಕಾಣ್ತಿದ್ದಾರೆ; ಅವರ ಕ್ಷೇತ್ರದ ಜಾತ್ರೆಲಿ ಹಾಕಿಕೊಳ್ಳಲಿ; ರೇಣುಕಾಚಾರ್ಯ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೆಲವರು ಸೂಟು ಹೊಲಿಸಿ ಸಿಎಂ ಕನಸು ಕಾಣ್ತಿದ್ದಾರೆ; ಅವರ ಕ್ಷೇತ್ರದ ಜಾತ್ರೆಲಿ ಹಾಕಿಕೊಳ್ಳಲಿ; ರೇಣುಕಾಚಾರ್ಯ ಕಿಡಿ

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಪರ 65 ಶಾಸಕರ ಸಹಿ ಸಂಗ್ರಹ ಮಾಡಿರುವುದು ಸತ್ಯ. ಇದರಲ್ಲಿ ಯಾವುದೇ ಅನುಮಾನಗಳು ಬೇಡ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿಗೆ ಸಮಯ ನೀಡಿದ್ದು, ಸಹಿ ಸಂಗ್ರಹವನ್ನು ನೀಡುತ್ತೇನೆ ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಇಂದು ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿ ನೀಡಲಿದ್ದಾರೆ. ನಾಯಕತ್ವ ಬದಲಾವಣೆ ಚರ್ಚೆಗೆ ತೆರೆ ಬೀಳಲಿದ್ದು, ಬಿಎಸ್ ವೈ ವಿರುದ್ಧ ತಂತ್ರಗಾರಿಕೆ ನಡೆಸುತ್ತಿರುವ ಕೆಲ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಲಿದ್ದಾರೆ ಎಂದರು.

BIG NEWS: ಹೊಸ ಸಂಚಲನಕ್ಕೆ ಕಾರಣವಾದ ಡಿವಿಎಸ್-ಪ್ರಧಾನಿ ಮೋದಿ ಭೇಟಿ; ಕುತೂಹಲ ಮೂಡಿಸಿದ ಚರ್ಚೆ

ಯಾರೋ ಮೂವರು ದೆಹಲಿಗೆ ಹೋಗಿ ಸುದ್ದಿ ವರಿಷ್ಠರ ಮನೆ ಗೇಟ್ ಮುಟ್ಟಿಬಂದರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲ್ಲ. ಕೆಲವರು ಸೂಟು ಹೊಲಿಸಿ ಸಿಎಂ ಕನಸು ಕಾಣುತ್ತಿದ್ದಾರೆ. ಸೂಟು ಬೂಟು ಅವರ ಕ್ಷೇತ್ರದ ಜಾತ್ರೆಯಲ್ಲಿ ಹಾಕಿಕೊಳ್ಳಲಿ. ಧಾರವಾಡ, ವಿಜಯಪುರದ ಶಾಸಕರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಕಿಡಿಕಾರಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...