ಬೆಂಗಳೂರು: ಕಾಲೇಜಿಗೆ ರಜೆ ಹಾಕಿ ಮೋಜು ಮಸ್ತಿಗಾಗಿ ಕಾರಿನಲ್ಲಿ ಟ್ರಿಪ್ ಹೊರಟಿದ್ದ ಕಾಲೇಜು ವಿದ್ಯಾರ್ಥಿಗಳ ಕಾರು ಕೆರೆಗೆ ಉರುಳಿ ಬಿದ್ದಿರುವ ಘಟನೆ ಆನೇಕಲ್ ಬಳಿಯ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ.
ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ರಜೆ ಹಾಕಿ ವೀಕೇಂಡ್ ಮಸ್ತಿಗಾಗಿ ಎಸ್ ಯು ವಿ ಕಾರಿನಲ್ಲಿ ಹೊರಟಿದ್ದರು. ಚೆನ್ನಯ್ಯನಪಾಳ್ಯ ಕೆರೆ ಕಟ್ಟೆಯ ಮೇಲೆ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿಬಿದ್ದಿದೆ.
ಕಾರಿನಲ್ಲಿದ್ದ 7 ವಿದ್ಯಾರ್ಥಿಗಳ ಪೈಕಿ ಐವರು ವಿದ್ಯಾರ್ಥಿಗಳು ಬಚಾವ್ ಅಗಿದ್ದು, ಇನ್ನಿಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ವಿದ್ಯಾರ್ಥಿಗಳಿಗಾಗಿ ಶೋಧಕಾರ್ಯ ಮುಂದುವರೆದಿದೆ.