ಬೆಂಗಳೂರು: ರಾಜ್ಯ ಸರ್ಕಾರದ 40% ಭ್ರಷ್ಟಾಚಾರ ಖಂಡಿಸಿ ಕಾಂಗ್ರೆಸ್ ಪೇಸಿಎಂ ಪೋಸ್ಟರ್ ಅಭಿಯಾನ ನಡೆಸಿದ ಬೆನ್ನಲ್ಲೇ ಇದೀಗ ಅಪರಿಚಿತರು ಕೂಡ ರಾಜ್ಯ ರಾಜಧಾನಿ ಬೆಂಗಳೂರಿನ ಗೋಡೆಗಳ ಮೇಲೆ ಕಂದಾಯ ಸಚಿವರ ವಿರುದ್ಧ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆರೆ ಒತ್ತುವರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅಪರಿಚಿತರು, ಪದ್ಮನಾಭನಗರದ ಹಲವೆಡೆಗಳಲ್ಲಿ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಿ, ’ಕೆರೆಗಳನ್ನು ನುಂಗಿದ ಸಾಮ್ರಾಟ ಅಶೋಕ್’ ಎಂದು ಬರೆದು ಸಚಿವರ ವಿರುದ್ಧ ಕಿಡಿಕಾರಿದ್ದಾರೆ.
ಅಲ್ಲದೇ ಕಾಣೆಯಾದ ಕೆರೆಗಳನ್ನು ಹುಡುಕಿಕೊಡಿ ಎಂದು ಪೋಸ್ಟರ್ ನಲ್ಲಿ ಆಗ್ರಹಿಸಲಾಗಿದೆ. ನಿನ್ನೆ ರಾತ್ರಿಯಿಂದ ಪದ್ಮನಾಭನಗರದ ವಿವಿಧೆಡೆಗಳಲ್ಲಿ ಈ ಪೋಸ್ಟರ್ ಗಳು ರಾರಾಜಿಸಿದ್ದು, ಸಿಎಂ ಬೆನ್ನಲ್ಲೇ ಕಂದಾಯ ಸಚಿವರಿಗೂ ಪೋಸ್ಟರ್ ಬಿಸಿ ತಟ್ಟಿದೆ.