ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೆಹಲಿ ನಿವಾಸದ ಮೇಲೆ ಐಟಿ ದಾಳಿ ಬಳಿಕ ವಿದೇಶಕ್ಕೆ ತೆರಳದಂತೆ ಕೋರ್ಟ್ ನೀಡಿದ್ದ ಸೂಚನೆಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದೆ.
ಮಾರ್ಚ್ 28ರಿಂದ ಏ.3 ರ ವರೆಗೆ ಎಕ್ಸ್ ಪೋನಲ್ಲಿ ಭಾಗವಹಿಸಲು ದುಬೈಗೆ ತೆರಳಲು ಅನುಮತಿ ಕೋರಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ ನ್ಯಾಯಾಲಯ, ದುಬೈಗೆ ತೆರಳಲು ಅನುಮತಿ ನೀಡಿದೆ.
ಐಟಿ ದಾಳಿ ಪ್ರಕರಣದ ಬಳಿಕ ವಿದೇಶಕ್ಕೆ ತೆರಳದಂತೆ ಕೋರ್ಟ್ ಸೂಚಿಸಿತ್ತು. ಅಲ್ಲದೇ ಒಂದು ವೇಳೆ ವಿದೇಶ ಪ್ರಯಾಣ ಮಾಡಬೇಕೆಂದರೆ ಕೋರ್ಟ್ ಅನುಮತಿ ಪಡೆಯುವಂತೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್, ಇದೀಗ ಎಲ್ ಪಿ ಎಫ್ ಎಲ್ ಇ ಎಕ್ಸ್ ಬೇಸ್ ಇಂಡಸ್ಟ್ರಿ ಆಹ್ವಾನದ ಮೇರೆಗೆ ವಿಶೇಷ ಅತಿಥಿಯಾಗಿ ದುಬೈನಲ್ಲಿ ನಡೆಯುತ್ತಿರುವ ಎಕ್ಸ್ ಪೋದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.
ಅಲ್ಲದೇ 2021, ಸೆ.22 ರಂದು ಪಾಸ್ ಪೋರ್ಟ್ ಅವಧಿ ಮುಕ್ತಾಯವಾಗಿದ್ದು, ನವೀಕರಿಸಲು ಅನುಮತಿ ನೀಡುವಂತೆಯೂ ಕೋರಿದ್ದರು. ಎರಡೂ ಅರ್ಜಿಗಳಿಗೆ ಸಮ್ಮತಿ ನೀಡಿರುವ ನ್ಯಾಯಾಲಯ ಏ.22ರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.