ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಕುಸಿಯುತ್ತಿದೆ. ಇದರಿಂದ ರಾಜ್ಯಕ್ಕೆ ಪ್ರಯೋಜನವಿಲ್ಲ. ಸಿಎಂ ಬಿ.ಎಸ್. ಯಡಿಯೂರಪ್ಪ ಶಕ್ತಿ ಕಳೆದುಕೊಂಡಿದ್ದಾರೆ. ಅವರಿಗೆ ವಯಸ್ಸಾಗಿದೆ. ಇದರಿಂದ ವಿಧಾನಸೌಧದ ಶಕ್ತಿ ಪೀಠ ಮುಸುಕಾಗುತ್ತಿದೆ ಎಂದು ಹೇಳುವ ಮೂಲಕ ಸಿಎಂ ಬದಲಾವಣೆಯಾಗಬೇಕು ಎಂದು ಎಂ.ಎಲ್.ಸಿ. ಹೆಚ್. ವಿಶ್ವನಾಥ್ ಬಲವಾಗಿ ಪ್ರತಿಪಾದಿಸಿದ್ದಾರೆ.
ಆರ್ಮ್ ರೆಸ್ಟ್ ವಿಚಾರವಾಗಿ ವಿಮಾನದಲ್ಲೇ ಪ್ರಯಾಣಿಕರ ಫೈಟ್…!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ಕುಟುಂಬ ರಾಜಕಾರಣ ಮಿತಿ ಮೀರಿ ಹೋಗಿದೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಅರುಣ್ ಸಿಂಗ್ ಭೇಟಿಯಾಗಿ ಹಲವು ವಿಚಾರಗಳನ್ನು ಹೇಳಿದ್ದೇನೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅವರಿಗೆ ವಿವರಿಸಿದ್ದೇನೆ ಎಂದರು.
ಐಟಿ ವಲಯಕ್ಕೆ ಭರ್ಜರಿ ಸುದ್ದಿ: ಅಗ್ರ 5 ಕಂಪನಿಗಳಿಂದ 96,000 ಉದ್ಯೋಗಿಗಳ ನೇಮಕಾತಿ
75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಬೇಡ ಎಂಬ ಸಿದ್ಧಾಂತ ಬಿಜೆಪಿ ಪಕ್ಷದಲ್ಲಿಯೇ ಇದೆ. ಹಾಗಾಗಿ ಪಕ್ಷದ ಸಿದ್ಧಾಂತ ಪಾಲಿಸುವ ಬಗ್ಗೆ ಪ್ರಸ್ತಾಪಿಸಿದ್ದೇನೆ. ಪಕ್ಷದ ಸಿದ್ಧಾಂತದ ಬಗ್ಗೆಯಾಗಲಿ, ಕಾರ್ಯಕ್ರಮದ ಬಗ್ಗೆಯಾಗಲಿ ಮಾತನಾಡಿಲ್ಲ. ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ಬಗ್ಗೆ ಹೇಳಿದ್ದೇನೆ. ಯಡಿಯೂರಪ್ಪನವರಿಗೆ ಮೊದಲಿದ್ದ ಶಕ್ತಿಯಿಲ್ಲ ಬದಲಾವಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ನಾಯಕರಿಗೆ ತಿಳಿಸಿದ್ದೇನೆ ಎಂದರು.