ಹುಬ್ಬಳ್ಳಿ; ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿರುವ ಶಾಸಕ ಜಮೀರ್ ಅಹ್ಮದ್, ಕುಮಾರಸ್ವಾಮಿ ಸೂಟ್ ಕೇಸ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಾನಗಲ್ ನಲ್ಲಿ ಕುಮಾರಸ್ವಾಮಿ ಕೇವಲ ಒಂದು ದಿನ ಮಾತ್ರ ಚುನಾವಣಾ ಪ್ರಚಾರ ಮಾಡಿದ್ದಾರೆ. ಕಾರಣ ಅವರಿಗೆ ಹಾನಗಲ್ ನಿಂದ ಕಡಿಮೆ ಹಣ ಬಂದಿರಬೇಕು. ಹಾಗಾಗಿ ಒಂದೇ ದಿನದಲ್ಲಿ ಪ್ರಚಾರ ಮುಗಿಸಿದ್ದಾರೆ ಎಂದರು.
ಕುಮಾರಸ್ವಾಮಿ ಸೂಟ್ ಕೇಸ್ ರಾಜಕಾರಣ ಮಾಡುತ್ತಿದ್ದಾರೆ. ಕನಿಷ್ಠ 3-4 ದಿನಗಳಾದರೂ ಹಾನಗಲ್ ನಲ್ಲಿ ಚುನಾವಣಾ ಪ್ರಚಾರ ನಡೆಸಬೇಕಿದ್ದ ಕುಮಾರಸ್ವಾಮಿ ಕೇವಲ ಒಂದು ದಿನ ಪ್ರಚಾರ ಮಾಡಿದ್ದಾರೆ. ಹಾನಗಲ್ ನಿಂದ ಕಡಿಮೆ ಹಣ ಬಂದಿರಬೇಕು. ಇದೇ ರೀತಿ ಆದರೆ ಹಾನಗಲ್ ಜೆಡಿಎಸ್ ಅಭ್ಯರ್ಥಿ ಬೀದಿಗೆ ಬೀಳ್ತಾರೆ ಎಂದು ವಾಗ್ದಾಳಿ ನಡೆಸಿದರು.
BREAKING: ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ
20-20 ಸರ್ಕಾರ ರಚನೆ ವೇಳೆ ಯಡಿಯೂರಪ್ಪಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಕುಮಾರಸ್ವಾಮಿಗೆ ಹೇಳಿದ್ದೆ. ಆದರೆ ಹೆಚ್.ಡಿ.ರೇವಣ್ಣ ಡಿಸಿಎಂ ಆಗುತ್ತಾರೆಂಬ ಕಾರಣಕ್ಕೆ ಕುಮಾರಸ್ವಾಮಿ ಬಿಎಸ್ ವೈಗೆ ಸಿಎಂ ಸ್ಥಾನ ಬಿಟ್ಟುಕೊಡಲಿಲ್ಲ. ಕುಮಾರಸ್ವಾಮಿಯವರು ಅಲ್ಪಸಂಖ್ಯಾತರನ್ನು ಮಾತ್ರವಲ್ಲ, ಒಕ್ಕಲಿಗರನ್ನೂ ಮುಗಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಉಪಚುನಾವಣೆ ಬಂದಾಗ ಮಾತ್ರ ಕುಮಾರಸ್ವಾಮಿಯವರಿಗೆ ಅಲ್ಪಸಂಖ್ಯಾತರ ನೆನಪಾಗುತ್ತದೆ. ನಿಜವಾಗಿ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ ರಾಮನಗರ, ಮಂಡ್ಯದಲ್ಲಿಯೂ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಲಿ ಎಂದು ಸವಾಲು ಹಾಕಿದರು. ನನಗೆ ರಾಜಕೀಯ ಗುರು ಎಂದರೆ ಹೆಚ್.ಡಿ.ದೇವೇಗೌಡರು ಹಾಗೂ ಸಿದ್ದರಾಮಯ್ಯ, ಸಿದ್ದರಾಮಯ್ಯ ಯಾವುದೇ ಜಾತಿ ಮತ ನೋಡಲ್ಲ. ನಾನು ಕಾಂಗ್ರೆಸ್ ಗೆ ಬಂದ ಮೇಲೆ ಸಿದ್ದರಾಮಯ್ಯ ನನಗೆ ನಾಲ್ಕು ಖಾತೆಗಳ ಜವಾಬ್ದಾರಿ ಕೊಟ್ಟಿದ್ದರು. ಆದರೆ ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಕೇವಲ ಹಜ್ ಹಾಗೂ ವಕ್ಫ್ ಖಾತೆ ಮಾತ್ರ ನೀಡಿದ್ದರು. ಇದು ಕುಮಾರಸ್ವಾಮಿ ನಮ್ಮನ್ನು ನೋಡುವ ರೀತಿ ಎಂದು ಗುಡುಗಿದರು.