ಕೊಪ್ಪಳ: ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಅವರು ನಮ್ಮವರೇ, ಕರೆದು ಮಾತನಾಡುತ್ತೇನೆ ಎಂದಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಾರ್ಯಕರ್ತರು ಸತ್ತಾಗ ಆಕ್ರೋಶ ಸಹಜ. ಆ ನೋವು ನಮಗೂ ಇದೆ, ಕಾರ್ಯಕರ್ತರ ದುಃಖ ನಮಗೆ ಅರ್ಥವಾಗುತ್ತೆ. ಸೂಲಿಬೆಲೆ ನನಗೆ ಆತ್ಮೀಯರು. ಅವರನ್ನು ಕರೆದು ಮಾತನಾಡುತ್ತೇನೆ. ತನಿಖೆಯ ಪ್ರಗತಿ ಬಗ್ಗೆ ತಿಳಿಸುತ್ತೇನೆ ಎಂದರು.
ಚಕ್ರವರ್ತಿ ಸೂಲಿಬೆಲೆ ಹಿಂದೂತ್ವದ ಪರ ಧ್ವನಿ ಎತ್ತಿದವರು. ಹಿಂದೂಗಳ ಕೊಲೆಯಾದಾಗ ಸಹಜವಾಗಿ ನೋವಾಗಿದೆ. ಹಾಗಾಗಿ ಮಾತನಾಡಿದ್ದಾರೆ. ಅವರೊಂದಿಗೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.