ಧಾರವಾಡ: ಕಾರ್ತಿಕ ಮಾಸದಲ್ಲಿ ಮಳೆ, ರೋಗ, ಭೂಮಿಯಿಂದ ತೊಂದರೆಯಾಗುವ ಲಕ್ಷಣಗಳಿವೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಆಗಸ್ಟ್ ನಲ್ಲಿ ತಾವು ನುಡಿದಿದ್ದ ಭವಿಷ್ಯವಾಣಿ ಬಗ್ಗೆಯೂ ಮಾತನಾಡಿರುವ ಕೋಡಿಶ್ರೀಗಳು ಈ ಸಂವತ್ಸರ ಆರಂಭದಲ್ಲಿಯೇ ನಾನು ಭವಿಷ್ಯ ನುಡಿದಿದ್ದೆ. ಮಳೆ, ಸಿಡಿಲು, ಬೆಂಕಿ ಕಾಟ, ಮತಾಂಧತೆ ಹೆಚ್ಚುತ್ತದೆ. ಸಾವು-ನೋವು ಸಂಭವಿಸುತ್ತದೆ. ಜನ ಅಶಾಂತಿಯಿಂದ ಬಳಲುತ್ತಾರೆ. ಭೂಮಿ ಕುಸಿಯುತ್ತದೆ ಎಂದು. ಅಂತಹ ಘಟನಾವಳಿಗಳು ನಡೆದಿವೆ ಎಂದರು.
ಇನ್ನು ಮುಂದೆಯೂ ಮಳೆ ಮುಂದುವರೆಯುತ್ತದೆ. ಕಾರ್ತಿಕ ಮಾಸದಲ್ಲಿ ತೊಂದರೆಯಾಗಲಿದೆ. ಮಳೆ, ರೋಗ, ಭೂಮಿಯಿಂದ ಸಮಸ್ಯೆಯಾಗುತ್ತದೆ. ಕಾಡುಗಳಿಂದ ನಾಡಿಗೆ ಪ್ರಾಣಿಗಳು ಧಾವಿಸುತ್ತವೆ. ಪ್ರಕೃತಿಯಿಂದ ಅಲ್ಲೋಲಕಲ್ಲೊಲ ಸೃಷ್ಟಿಯಾಗುತ್ತದೆ. ರಾಜ್ಯಕ್ಕೆ ಒಂದು ಅವಘಡ ಎದುರಾಗಲಿದೆ. ಅದನ್ನೂ ಕಾದು ನೋಡಿ ಎಂದು ಹೇಳಿದ್ದಾರೆ.
ಮತಾಂಧತೆ, ಜಾತೀಯತೆ, ಆಕ್ರೋಶ ಹೆಚ್ಚಾಗುತ್ತದೆ. ಕಾರ್ತಿಕ ಮಾಸದಲ್ಲಿ ಎಚ್ಚರ ವಹಿಸಬೇಕು. ಅಶ್ವಯುಜದಿಂದ ಯುಗಾದಿವರೆಗೂ ಅಂಗಾಂಗ ಕಾಯಿಲೆಗಳು ಹೆಚ್ಚುತ್ತವೆ ಎಂದು ತಿಳಿಸಿದ್ದಾರೆ.