ಚಿಕ್ಕಮಗಳೂರು: ಸಹೋದ್ಯೋಗಿಗಳ ವಿರುದ್ಧವೇ ಕುಮ್ಮಕ್ಕು ನೀಡಿ, ಪಿತೂರಿ ಮಾಡಿದ ಆರೋಪದಲ್ಲಿ ಕಾನ್ಸ್ ಟೇಬಲ್ ಓರ್ವರನ್ನು ಅಮಾನತುಗೊಳಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಮಂಜುನಾಥ್ ಅಮಾನತುಗೊಂಡಿರುವ ಪೊಲೀಸ್ ಕಾನ್ಸ್ ಟೇಬಲ್. ಕಳ್ಳತನದ ಆರೋಪದಲ್ಲಿ ಆಟೋಚಾಲಕನೊಬ್ಬನ ಮೇಲೆ ಮೂಡಿಗೆರೆ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಲೋಹಿತ್ ಹಾಗೂ ವಸಂತ ಎಂಬುವವರು ಹಲ್ಲೆ ಮಾಡಿದ್ದರು. ಈ ಪ್ರಕರಣದಲ್ಲಿ ಚಿಕ್ಕಮಗಳೂರು ಎಸ್ ಪಿ ಉಮಾ ಪ್ರಶಾಂತ್ ಇಬ್ಬರು ಪೇದೆಗಳನ್ನು ಕೆಲಸದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಈ ಇಬ್ಬರು ಕಾನ್ಸ್ ಟೇಬಲ್ ವಿರುದ್ಧ ದೂರು ನೀಡಿ, ಹಣ ಪಡೆಯುವಂತೆ ಸಾರ್ವಜನಿಕರ ಮೇಲೆ ಮಂಜುನಾಥ್ ಒತ್ತಡ ಹಾಕಿದ್ದ. ಸಹೋದ್ಯೋಗಿಗಳ ವಿರುದ್ಧವೇ ಪಿತೂರಿ ಮಾಡಿದ್ದಕ್ಕಾಗಿ ಈಗ ಕಾನ್ಸ್ಟೇಬಲ್ ಮಂಜುನಾಥ್ ನನ್ನು ಅಮಾನತುಗೊಳಿಸಲಾಗಿದೆ.