alex Certify BIG NEWS: ಕಾನೂನಿನ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರಿಗೆ ಪಂಚ ಪ್ರಶ್ನೆಗಳನ್ನು ಕೇಳಿದ ಸಿ.ಟಿ. ರವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾನೂನಿನ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರಿಗೆ ಪಂಚ ಪ್ರಶ್ನೆಗಳನ್ನು ಕೇಳಿದ ಸಿ.ಟಿ. ರವಿ

ಬೆಂಗಳೂರು: ಯಾವಾಗಲೂ ಕಾನೂನಿನ ಬಗ್ಗೆ ಮಾತನಾಡುವ, ಹೋರಾಟ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಐದು ಪ್ರಶ್ನೆಗಳನ್ನು ಕೇಳುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕುಟುಂಬ ಕಾನೂನಿಗಿಂತ ಅತೀತರೇ ? ಕಾನೂನಿಗಿಂತ ಅತೀತರಾದರೆ ಸಂವಿಧಾನದ ಯಾವ ಅಡಿಯಲ್ಲಿ ಪ್ರಾತಿನಿಧ್ಯ ನೀಡಿದೆ ? ಅಸೋಸಿಯೇಷನ್ ಜರ್ನಲ್ ನಲ್ಲಿರುವ ಮೂಲ ಷೇರುದಾರರು ಎಷ್ಟು ? ಯಂಗ್ ಇಂಡಿಯಾದಲ್ಲಿರುವ ಪಾಲುದಾರರು ಎಷ್ಟು ? ಎಂದು ಪ್ರಶ್ನಿಸಿದ್ದಾರೆ.

ಎಜೆಎಲ್ ಆರಂಭವಾದಾಗ ಐದೂವರೆ ಸಾವಿರ ಷೇರುದಾರರಿದ್ದರು. ಯಂಗ್ ಇಂಡಿಯಾಗೆ ವರ್ಗಾವಣೆ ಮಾಡುವಾಗ ಇದ್ದದ್ದು 1,500 ಇಲ್ಲಿ ವರ್ಗಾವಣೆಯಾದಾಗ ನಾಲ್ಕು ಜನ ಪಾಲುದಾರರಿದ್ದಾರೆ. ಸೋನಿಯಾ 38%, ರಾಹುಲ್ 38%, ಮೋತಿಲಾಲ್ ವೊಹ್ರಾ, ಆಸ್ಕರ್ ಫರ್ನಾಂಡೀಸ್. ಮೋತಿಲಾಲ್ ವೋಹ್ರಾ, ಫರ್ನಾಂಡೀಸ್ ಶಿವನ ಪಾದ ಸೇರಿದ್ದಾರೆ. ಪ್ರೈವೆಟ್ ಕಂಪನಿಗೆ ವರ್ಗಾವಣೆ ಮಾಡುವಾಗ ಕಾನೂನಿನಲ್ಲಿ ಅಧಿಕಾರ ಇದೆಯಾ? ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ವರ್ಗಾವಣೆ ಮಾಡುವಾಗ ಎಜೆಎಲ್ ಕಂಪನಿ ಸಾಲ ಎಷ್ಟಿತ್ತು ? ಆಸ್ತಿ ಪ್ರಮಾಣ ಇಂದಿನ ಮಾರುಕಟ್ಟೆ ದರ ಅಲ್ಲ. ಸಬ್ ರಿಜಿಸ್ಟ್ರಾರ್ ಮೌಲ್ಯ 2 ಸಾವಿರ ಕೋಟಿ ಬೆಲೆ ಬಾಳುವ ಆಸ್ತಿ ಅಸೆಸ್ ಮಾಡದೆ ಕೇವಲ 50 ಲಕ್ಷಕ್ಕೆ ವರ್ಗಾವಣೆ ಮಾಡಿರೋದು ಅಕ್ರಮ ಅಲ್ವಾ ? ಯಂಗ್ ಇಂಡಿಯಾ ಕಂಪನಿ ಈಗ ಯಾವ ಕಾರಣವಾಗಿ ಯಾವ ವಹಿವಾಟು ನಡೆಸುತ್ತಿದೆ ಎಂದು ಕೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...