ಕೊಪ್ಪಳ; ಕೆಲ ಹುಚ್ಚು ರಾಜಕಾರಣಿಗಳು ರೆಡ್ದಿ 12 ವರ್ಷಗಳಿಂದ ಮನೆಯಲ್ಲಿದ್ದಾನೆ. ಆತನ ರಾಜಕಾರಣ ಮುಗಿದಿದೆ ಎಂದು ಹೇಳುತ್ತಿದ್ದರು ಇಂದಿನಿಂದ ನನ್ನ ಬೇಟೆ ಆರಂಭವಾಗುತ್ತೆ ಎಂದು ಗಾಲಿ ಜನಾರ್ಧನ ರೆಡ್ಡಿ ಶಪಥ ಮಾಡಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷ ಸ್ಥಾಪಿಸಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಗಾಲಿ ಜನಾರ್ಧನ ರೆಡ್ಡಿ, ಹುಲಿ ಯಾವತ್ತು ಹುಲಿನೆ. ಅದು ಬೋನಿನಲ್ಲಿರಲಿ, ಜೈಲಿನಲ್ಲಿರಲಿ ಹುಲಿ ಹುಲಿಯೇ. ಹುಲಿ ಯಾವತ್ತೂ ಸಣ್ಣಪುಟ್ಟ ಬೇಟೆಯಾಡಲ್ಲ, ಕಾದುನೋಡಿ ದೊಡ್ಡ ಬೇಟೆಯಾಡುತ್ತೆ. ಹಾಗೇ ಇಂದಿನಿಂದ ನನ್ನ ಬೇಟೆ ಆರಂಭವಾಗಲಿದೆ ಎಂದು ಗುಡುಗಿದ್ದಾರೆ.
ಇದೇ ವೇಳೆ ಕೆ ಆರ್ ಪಿ ಪಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಜನಾರ್ಧನ ರೆಡ್ಡಿ, ಕಾಂಗ್ರೆಸ್ ಪ್ರಣಾಳಿಕೆಗೆ ಟಕ್ಕರ್ ಕೊಡುವ ಯೋಜನೆ ಪ್ರಕಟಿಸಿದ್ದಾರೆ.
ಕೆ ಆರ್ ಪಿಪಿ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 2,500 ರೂಪಾಯಿ ಆರ್ಥಿಕ ನೆರವು ನೀಡಲಾಗುವುದು. ಸ್ತ್ರೀ ಶಕ್ತಿ ಸಂಘಟನೆಗಳಿಗೆ 10 ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ, ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರಕ್ಕೂ ಹೆಚ್ಚು ವೇತನ ನೀಡುವುದಾಗಿ ಘೋಷಿಸಿದ್ದಾರೆ.