ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ನಡೆಸಿದ್ದು, ಶಾಂತಿಯುತ ಮತದಾನ ನಡೆಯುವ ವಿಶ್ವಾಸವಿದೆ ಎಂದು ಆಯೋಗ ತಿಳಿಸಿದೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಇವಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಬಳಸಿದ ಇವಿಎಂ ಬಳಸದಂತೆ ಕಾಂಗ್ರೆಸ್ ಮಾಡಿರುವ ಮನವಿ ತಿರಸ್ಕರಿಸಿದ ಮುಖ್ಯಚುನಾವಣಾ ಆಯುಕ್ತರು, ನಾಲ್ಕು ರಾಜ್ಯಗಳಲ್ಲಿ ಇವಿಎಂ ನಿಂದ ಯಾವುದೇ ಸಮಸ್ಯೆಯಾಗಿಲ್ಲ. ಯಾರಿಂದಲೂ ಇವಿಎಂ ದುರುಪಯೋಗ ಮಾಡಲು ಸಾಧ್ಯವಿಲ್ಲ ಇವಿಎಂಗಳಿಗೆ ಮೂರು ಸುತ್ತಿನ ಭದ್ರತೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಹಲವು ಬಾರಿ ಇವಿಎಂ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವವಾಗುತ್ತಿವೆ. ಆದರೆ ಇವಿಎಂ ದುರ್ಬಳಕೆ ಮಾಡಲು ಆಗುವುದಿಲ್ಲ. ಯಾವುದೇ ರೀತಿಯ ಚುನಾವಣೆ ಅವ್ಯವಹಾರ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗುವುದು. ಪ್ರತಿ ಬ್ಯಾಂಕ್ ವ್ಯವಹಾರವನ್ನು ಸಹ ಗಮನಿಸುತ್ತೇವೆ. ಯಾವುದೇ ಹಣ ಅಥವಾ ಇನ್ನಿತರ ಆಮಿಷ ಕೊಟ್ಟರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.