ನವದೆಹಲಿ: ಕಾಂಗ್ರೆಸ್ ನ ಅಧಿಕೃತ ಟ್ವಿಟರ್ ಖಾತೆ ಹಾಗೂ 6 ನಾಯಕರ ಟ್ವಿಟರ್ ಖಾತೆಯನ್ನು ಲಾಕ್ ಮಾಡಲಾಗಿದೆ. ಕೇಂದ್ರ ಸರ್ಕಾರದ ಇಂತಹ ನಡೆಯಿಂದ ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಹತ್ತಿಕ್ಕಲಾಗದು ಎಂದು ಕಿಡಿಕಾರಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಣದೀಪ್ ಸುರ್ಜೆವಾಲಾ, ಅಜಯ್ ಮಕೇನ್, ಮಾಣಿಕ್ಯಂ ಠಾಗೋರ್, ಜಿತೇಂದ್ರ ಸಿಂಗ್ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸುಷ್ಮಿತಾ ದೇವ್ ಅವರ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ಬುಧವಾರ ಲಾಕ್ ಮಾಡಲಾಗಿತ್ತು ಎಂದು ಕಾಂಗ್ರೆಸ್ ಫೇಸ್ ಬುಕ್ ಮೂಲಕ ಮಾಹಿತಿ ಹಂಚಿಕೊಂಡಿದೆ.
ಏನಿದು ʼಮಾರ್ಬರ್ಗ್ʼ ವೈರಸ್….? ಇಲ್ಲಿದೆ ಸಂಪೂರ್ಣ ವಿವರ
ನಮ್ಮ ನಾಯಕರ ಟ್ವಿಟರ್ ಖಾತೆ ಲಾಕ್ ಮಾಡಲು ಲಾರ್ಡ್ ನರೇಂದ್ರ ಮೋದಿಯವರೇ ನೇರ ಕಾರಣ. ನಮ್ಮನ್ನು ಎಷ್ಟೇ ಲಾಕ್ ಮಾಡಿದರೂ ಬೀಗದ ಹಿಂದಿನಿಂದಲೇ ನಾವು ನ್ಯಾಯಕ್ಕಾಗಿ ಹೋರಾಡುತ್ತೇವೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದೆ.