ಬೆಂಗಳೂರು: ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್ ಪಾದಯಾತ್ರೆ ನಿರ್ಧಾರಕ್ಕೆ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯೋಜನೆ ಜಾರಿ ಬಗ್ಗೆ ಏನೂ ಮಾಡಿಲ್ಲ ಈಗ ರಾಜಕೀಯಕ್ಕಾಗಿ ಪಾದಯಾತ್ರೆಗೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರಿಗೆ ಬದ್ಧತೆ ಇಲ್ಲ. ಬದ್ಧತೆ ಇಲ್ಲದೇ ಕೇವಲ ರಾಜಕೀಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರು ಜಾತಿವಾದಿಗಳೆಂದು ಆರೋಪಿಸುತ್ತಿದ್ದಾರೆ. ನಾವು ಜಾತಿವಾದಿಗಳಾಗಿದ್ದಕ್ಕೆ ಹಾಜಬ್ಬ ಅಂತವರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದೆವು. ಮನಸ್ಸಿನ ತುಂಬಾ ಕೊಳಕನ್ನೇ ತುಂಬಿಕೊಂಡಿರುವ ಕಾಂಗ್ರೆಸ್ಸಿಗರಿಗೆ ಎಲ್ಲವೂ ಕೊಳಕಾಗಿಯೇ ಕಾಣುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿ-20 ನಾಯಕತ್ವ ತೊರೆದ ವಿರಾಟ್ ಕೊಹ್ಲಿಗೆ ಐಸಿಸಿ ವಿಶೇಷ ಗೌರವ
ಇದೇ ವೇಳೆ ಬಿಟ್ ಕಾಯಿನ್ ವಿಚಾರವಾಗಿ ಮಾತನಾಡಿದ ಸಿ.ಟಿ.ರವಿ, ಶ್ರೀಕಿ ಬಂಧನ ಮಾಡಿದ್ದು ಕಾಂಗ್ರೆಸ್ ನವರು. ವಿಚಾರಣೆ ನಡೆಸಿದ್ದು ಬಿಜೆಪಿ. ಅದಕ್ಕೂ ಮೊದಲು ಮಲ್ಯ ಟವರ್ ನಲ್ಲಿ ಶ್ರೀಕಿ ಯಾರ ಜೊತೆ ಮಜಾ ಮಾಡಿಕೊಂಡಿದ್ದ? ಯಾವ ಕಾಂಗ್ರೆಸ್ ನಾಯಕರ ಮಗನ ಜೊತೆ ಇದ್ದ ಎಂಬುದನ್ನು ಬಹಿರಂಗಪಡಿಸಲಿ. ಅನಗತ್ಯವಾಗಿ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡುವುದು ಬೇಡ ಎಂದು ಹೇಳಿದರು.