ಬೆಂಗಳೂರು: ವಿಪಕ್ಷ ನಾಯಕನ ಸ್ಥಾನದ ವಿಚಾರವಾಗಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ವಿಪಕ್ಷ ನಾಯಕನ ಸ್ಥಾನಕ್ಕೆ ಅಪೇಕ್ಷೆ ಪಟ್ಟಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ನಾನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಸೆ ಪಟ್ಟಿಲ್ಲ, ಆದರೆ ಕಾಂಗ್ರೆಸ್ ನಾಯಕರಿಗೆ ತಕ್ಕ ಉತ್ತರ ಕೊಡುವವನು ನಾನೊಬ್ಬನೆ ಎಂದು ಹೇಳಿದ್ದಾರೆ.
ನಾನು ವಿಪಕ್ಷ ನಾಯಕನಾದರೆ ಮಜಾ ಇರುತ್ತೆ. ಇವರ ಭ್ರಷ್ಟಾಚಾರ, ಗೂಂಡಾಗಿರಿ 6 ತಿಂಗಳು ಇರುವುದಿಲ್ಲ ಎಂದು ಹೇಳಿದರು.