
ಬೆಂಗಳೂರು: ಬಿಜೆಪಿ ರೌಡಿ ಶೀಟರ್ ಗಳ ಅಡ್ಡಾ ಆಗಿದೆ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನಲ್ಲಿರುವ ರೌಡಿ ಶೀಟರ್ ಗಳ ಸಂಖ್ಯೆ ಎಷ್ಟಿದೆ ಎಂದು ಮೊದಲು ಎಣಿಸಿಕೊಳ್ಳಲಿ ಎಂದು ಹೇಳಿದ್ದಾರೆ.
ರೌಡಿ ಶೀಟರ್ ಗಳಾದ ಸೈಲೆಂಟ್ ಸುನೀಲ್ ಹಾಗೂ ಫೈಟರ್ ರವಿ ಬಿಜೆಪಿ ಸೇರ್ಪಡೆಗೆ ಕಸರತ್ತು ನಡೆದಿದೆ ಎಂಬ ವಿಚಾರ ಕೇಳಿಬಂದಿತ್ತು. ರೌಡಿಶೀಟರ್ ಗಳ ಕಾರ್ಯಕ್ರಮಗಳಲ್ಲಿಯೂ ಬಿಜೆಪಿ ನಾಯಕರು ಭಾಗಿಯಾಗಿದ್ದರು. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿ ರೌಡಿಗಳ ಅಡ್ಡಾ ಎಂದು ಕಿಡಿಕಾರಿತ್ತು. ಕಾಂಗ್ರೆಸ್ ಟೀಕೆಗೆ ಸಿಎಂ ಬೊಮ್ಮಾಯಿ ಮೊದಲು ಕಾಂಗ್ರೆಸ್ ನಲ್ಲಿರುವ ರೌಡಿಶೀಟರ್ ಗಳ ಸಂಖ್ಯೆ ಬಗ್ಗೆ ಎಣಿಸಿಕೊಳ್ಳಲಿ ಎಂದು ಹೇಳಿದ್ದಾರೆ.