ಹುಬ್ಬಳ್ಳಿ: ನನ್ನ ವಿರುದ್ಧ ಅಪ್ರಪ್ರಚಾರ ಮಾಡಲು ಬಿಜೆಪಿಯವರು ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಾವ್ಯಾಕೆ ರಾಹುಲ್ ವಿರುದ್ಧ ಹಣ ಖರ್ಚು ಮಾಡಲಿ ? ಅವರೊಬ್ಬ ಅಪ್ರಯೋಜಕ, ನಿಷ್ಪ್ಪ್ರಯೋಜಕ, ಅವರಿಗೆ ಬುದ್ಧಿ ಇಲ್ಲ ಎಂದು ಜನರೇ ಹೇಳುತ್ತಿದ್ದಾರೆ. ಇದನ್ನೆಲ್ಲ ಹೇಳುತ್ತಿರುವುದು ನಾವಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಭಾರತ್ ಜೋಡೋ ಯಾತ್ರೆಯಿಂದ ಯಾವುದೇ ಪ್ರಯೋಜನವಾಗದು, ಬಿಜೆಪಿ ಮೇಲೆ ಇದು ಯಾವ ಪರಿಣಾಮವನ್ನೂ ಬೀರಲ್ಲ ಎಂದರು.
ಕಾಂಗ್ರೆಸ್ ಗೆ ವಿರೋಧ ಪಕ್ಷದಲ್ಲಿರಲೂ ಕೂಡ ಅರ್ಹತೆ ಇಲ್ಲ. ಇದು ಜನರಿಗೂ ಗೊತ್ತಾಗಿದೆ. ಅವರ ಪಕ್ಷದವರಿಗೂ ಈ ವಿಚಾರ ಗೊತ್ತು. ಸ್ಪರ್ಧೆ ಮಾಡುವ ಎಲ್ಲಾ ಚುನಾವಣೆಗಳಲ್ಲಿಯೂ ಸೋಲುತ್ತಿದ್ದಾರೆ ಎಂದು ಲೇವಡಿ ಮಾಡಿದರು.