ಬೆಂಗಳೂರು: ಕಾಂಗ್ರೆಸ್ ಕಾರ್ಯಾಗಾರದ ವೇಳೆ ಕೈ ಕಾರ್ಯಕರ್ತರ ಎರಡು ಗುಂಪುಗಳ ನಡುವೆಯೇ ಗಲಾಟೆ ನಡೆದು ಮಾರಾಮಾರಿ ನಡೆದಿದೆ.
ಕೆಪಿಸಿಸಿ ಸದಸ್ಯರಾಗಿರುವ ಪಿ.ಎನ್. ಕೃಷ್ಣಮೂರ್ತಿಯವರಿಗೆ ಸಭೆಗೆ ಆಹ್ವಾನಿಸದೇ ಕಾರ್ಯಾಗಾರ ನಡೆಸಲಾಗಿದೆ ಎಂದು ಆರೋಪಿಸಿ ಬೆಂಬಲಿಗರು ಕ್ಯಾತೆ ತೆಗೆದಿದ್ದಾರೆ. ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ನಾಗಲಕ್ಷ್ಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿ.ಎನ್. ಕೃಷ್ಣಮೂರ್ತಿ ಅವರ 20ಕ್ಕು ಹೆಚ್ಚು ಬೆಂಬಲಿಗರು ಸಭೆಯಲ್ಲಿ ಏಕಾಏಕಿ ಗಲಾಟೆ ನಡೆಸಿದ್ದು, ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ ಎಂದು ತಿಳಿದುಬಂದಿದೆ.