ಬೆಂಗಳೂರು: ಕಲ್ಲು ಕ್ವಾರಿ ಹೊಂಡದಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.
16 ವರ್ಷದ ಪವನ್ ಮೃತ ಬಾಲಕ. ದಾಬಸ್ ಪೇಟೆಯ ಪಾಂಡವಪುರ ನಿವಾಸಿ. ನಾಲ್ವರು ವಿದ್ಯಾರ್ಥಿಗಳು ಎಸ್ ಎಲ್ ಎನ್ ಕ್ರಷರ್ ನ ಕಲ್ಲು ಕ್ವಾರಿಗೆ ಈಜಲು ಹೋಗಿದ್ದರು. ಈ ವೇಳೆ ಓರ್ವ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.