ಕೊಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷ ಸ್ಥಾಪಿಸುವ ಮೂಲಕ ವಿಧಾನಸಭಾ ಚುನಾವಣಾ ಅಖಾಡಕ್ಕೆ ಧುಮುಕಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದಾರೆ.
ಕೊಪ್ಪಳದ ಗಂಗಾವತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜನಾರ್ಧನ ರೆಡ್ಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ 5 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ. ಗೆಲ್ಲುತ್ತಾರೆ ಎಂದು ಸರ್ವೆ ಮಾಡಿಯೇ ಅಭ್ಯರ್ಥಿಗಳ ಹೆಸರನ್ನು ಘೋಷಿಸುತ್ತಿದ್ದೇವೆ. ನಾನು ಒಂದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು.
ಬಳ್ಳಾರಿಯ ಸಿರಗುಪ್ಪ ಕ್ಷೇತ್ರ – ಧರೆಪ್ಪ ನಾಯಕ್
ಕನಕಗಿರಿ ಕ್ಷೇತ್ರ – ಡಾ.ಚಾರುಲ್ ದಾಸರಿ
ನಾಗಠಾಣಾ ಕ್ಷೇತ್ರ – ಶ್ರೀಕಾಂತ್
ಸಿಂಧನೂರು ಕ್ಷೇತ್ರ – ನೆಕ್ಕಂಟಿ ಮಲ್ಲಿಕಾರ್ಜುನ
ಹಿರಿಯೂರು ಕ್ಷೇತ್ರ – ಮಹೇಶ್