ರಾಯಚೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿರುವ ಬ್ಬೆನ್ನಲ್ಲೇ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಸಮಯ ಬಂದರೆ ಹೋರಾಟಕ್ಕೆ ಸಿದ್ಧ ಎಂದು ತಿಳಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ಗಡಿ ವಿವಾದದ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ. ಗಡಿ ವಿವಾದವನ್ನು ಯಾರೂ ದೊಡ್ಡದು ಮಾಡಬಾರದು. ಅಂತಹ ಸಮಯ ಬಂದರೆ ಇಡೀ ಕನ್ನಡ ಚಿತ್ರರಂಗ ಒಗ್ಗಟ್ಟಿನಿಂದ ಹೋರಾಟಕ್ಕೆ ಬರುತ್ತೆ. ಎಲ್ಲಾ ನಟ-ನಟಿಯರು ಒಗ್ಗಟ್ಟಿನಿಂದ ಬರುತ್ತೇವೆ ಎಂದು ಹೇಳಿದರು.
ಮೊದಲು ನಾವು ಎಲ್ಲಿದ್ದೇವೆ? ಆ ಜಾಗಕ್ಕೆ ಮೊದಲು ಎಲ್ಲರೂ ಗೌರವ ಕೊಡಬೇಕು. ಎಲ್ಲರೂ ಸಹೋದರ ಭಾವನೆಯಿಂದ ಬಾಳೋಣ. ಎಲ್ಲರನ್ನೂ ಒಳ್ಳೆಯ ರೀತಿಯಿಂದ ಕಾಣೋಣ. ಗಡಿ ವಿವಾದವನ್ನು ಅನಗತ್ಯವಾಗಿ ದೊಡ್ಡದು ಮಾಡುವುದು ಬೇಡ ಎಂದು ಹೇಳಿದರು.