ಹುಬ್ಬಳ್ಳಿ: ಬಾಂಗ್ಲಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜ್ಯದ ಯೋಧ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
49 ವರ್ಷದ ಗಂಗಾಧರಯ್ಯ ಹಿರೇಮಠ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ವೆಸ್ಟ್ ಬಾಂಗ್ಲಾದ ಕುಚ್ ಬಿಹಾರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಗಂಗಾಧರಯ್ಯ ಹಿರೇಮಠ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದವರಾಗಿದ್ದಾರೆ. ಬಿಎಸ್ಎಫ್ ಬೆಟಾಲಿಯನ್ 138ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕಳೆದ 28 ವರ್ಷಗಳಿಂದ ದೇಶ ಸೇವೆಯಲ್ಲಿ ನಿರತರಾಗಿದ್ದರು. ಕರ್ತವ್ಯದಲ್ಲಿದ್ದಾಗಲೇ ಗಂಗಾಧರಯ್ಯ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದು, ಇಂದು ರಾತ್ರಿ ರೊಟ್ಟಿಗವಾಡ ಗ್ರಾಮಕ್ಕೆ ಅವರ ಪಾರ್ಥಿವ ಶರೀರ ಆಗಮಿಸಲಿದ್ದು, ನಾಳೆ ಅಂತ್ಯಕ್ರಿಯೆ ನೆರವೇರಲಿದೆ.