ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ವ್ಯಕ್ತಿಯೋರ್ವನ ವಿರುದ್ಧ ಮಂಗಳೂರು ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಬೈಂದೂರು ಮೂಲದ ಲಕ್ಷ್ಮಿಕಾಂತ್ ಎಂಬ ವಕ್ತಿಯ ವಿರುದ್ಧ ಉಡುಪಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ಷ್ಮಿಕಾಂತ್ ಬೈಂದೂರು ಎಂಬ ವ್ಯಕ್ತಿಯ ಫೇಸ್ ಬುಕ್ ನಲ್ಲಿ ಫಾಜಿಲ್ ಹತ್ಯೆ ಆರೋಪಿಗಳು ಹೀರೋಗಳು… ಒಬ್ಬ ಪ್ರವೀಣ್ ಗೆ ಒಬ್ಬ ಫಾಜಿಲ್ ಸಾಕಾಗಲ್ಲ. ಪ್ರತಿಕಾರ ಹೇಗಿತ್ತು ಎಂದು ಪೋಸ್ಟ್ ಹಾಕಲಾಗಿತ್ತು. ಕೋಮು ಪ್ರಚೋದನೆ ಹಿನ್ನೆಲೆಯಲ್ಲಿ ಇದೀಗ ಬೈಂದೂರು ಮೂಲದ ಲಕ್ಷ್ಮಿಕಾಂತ್ ವಿರುದ್ಧ ಪ್ರಕರಣ ದಾಖಲಾಗಿದೆ.