ಬೆಂಗಳೂರು: ಕಾಂಗ್ರೆಸ್ ನಿಂದ ಲಿಂಗಾಯಿತ ಸಿಎಂ ಟಾರ್ಗೆಟ್ ಎಂಬ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿರುವ ರಾಜ್ಯ ಕಾಂಗ್ರೆಸ್ ಘಟಕ, ಕಮಿಷನ್ನಿಗಾಗಿ ಕಿರುಕುಳ ನೀಡಿ 40% ಸರ್ಕಾರ ಕೊಲೆ ಮಾಡಿದ ಸಂತೋಷ್ ಪಾಟೀಲ್ ಕೂಡ ಲಿಂಗಾಯತ. ಬಿಜೆಪಿ ಸರ್ಕಾರ ಲಿಂಗಾಯಿತ ವಿರೋಧಿ ಸರ್ಕಾರ ಎಂದು ಕಿಡಿ ಕಾರಿದೆ
ಪರೀಕ್ಷೆ ಪಾಸ್ ಆಗ್ಬೇಕು ಅಂದ್ರೆ 35 ಮಾರ್ಕ್ಸ್ ಪಡೆಯಬೇಕು ! ಬಿಜೆಪಿ ಸರ್ಕಾರದಲ್ಲಿ ಬಿಲ್ ಪಾಸ್ ಆಗ್ಬೇಕು ಅಂದ್ರೆ 40% ಕೊಡಲೇಬೇಕು ! ನಿನ್ನೆ ಬಿಜೆಪಿಯವರು ಕಳಿಸಿದ ಬಸ್ಸು “ಡಕೋಟಾ ಇಂಜಿನ್ ಸರ್ಕಾರ, ಬ್ರೇಕ್ ಇಲ್ಲದ ಭ್ರಷ್ಟಾಚಾರ” ಎಂದು ರೋಧಿಸುತ್ತಿತ್ತು ! ಕರ್ನಾಟಕ ಈಗ PayCM ಮುಕ್ತ ರಾಜ್ಯವಾಗಬೇಕಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದೆ.
ಜಾತಿ ಶೀಲ್ಡ್ ಹಿಡಿದು ಕಮಿಷನ್ ಭ್ರಷ್ಟಾಚಾರವನ್ನು ರಕ್ಷಿಸಲು ಬಿಜೆಪಿ ವಿಫಲ ಯತ್ನ ನಡೆಸುತ್ತಿದೆ. ಮಠಗಳ ಅನುದಾನದಲ್ಲೂ 30% ಕಮಿಷನ್ ದೋಚಲಾಗಿದೆ ಎಂದು ಲಿಂಗಾಯತ ಸ್ವಾಮಿಗಳೇ ಆರೋಪಿಸಿದ್ದರು. ಇದು ಲಿಂಗಾಯತರಿಗೆ ಮಾಡಿದ ಅವಮಾನವಲ್ಲವೇ ? 40% ಸರ್ಕಾರದ್ದು “ಜಾತ್ಯತೀತ ಭ್ರಷ್ಟಾಚಾರ” ಇದರಲ್ಲಿ ಲಿಂಗಾಯತರೂ ಸಂತ್ರಸ್ತರೇ.
40% ಕಮಿಷನ್ನಿಗಾಗಿ ಕಿರುಕುಳ ನೀಡಿ 40% ಸರ್ಕಾರ ಕೊಲೆ ಮಾಡಿದ ಸಂತೋಷ್ ಪಾಟೀಲ್ ಕೂಡ ಲಿಂಗಾಯತ. ಲಿಂಗಾಯತನೊಬ್ಬನ ಜೀವ ತೆಗೆದ ಬಿಜೆಪಿ ಸರ್ಕಾರ ಲಿಂಗಾಯತ ವಿರೋಧಿಯಲ್ಲವೇ ? ಕಮಿಷನ್ ಕಿರುಕುಳದ ಸಂತ್ರಸ್ತರಲ್ಲಿ ಲಿಂಗಾಯತ ಗುತ್ತಿಗೆದಾರರು ಇಲ್ಲವೇ ? ಬಿಜೆಪಿ ಲಿಂಗಾಯತ ವಿರೋಧಿ ಮಾತ್ರವಲ್ಲ, ಇಡೀ ಮನುಕುಲದ ವಿರೋಧಿ ಎಂದು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.