ಬೆಳಗಾವಿ: ಕಬಡ್ಡಿ ಪಂದ್ಯಾವಳಿ ವೇಳೆ ಯುವಕರ ಗುಂಪಿನ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದ್ದು, ಮಾರಾಮಾರಿ ನಡೆದ ಘಟನೆ ಬೆಳಗಾವಿಯ ಚಂದರಗಿ ಶಾಲಾ ಆವರಣದಲ್ಲಿ ನಡೆದಿದೆ.
ಚದರಂಗಿ ಹಾಗೂ ಕಟಕೋಳ ಶಾಲೆಗಳ ನಡುವೆ ಕಬಡ್ಡಿ ಫೈನಲ್ ಪಂದ್ಯ ಏರ್ಪಟ್ಟಿತ್ತು. ಪಂದ್ಯಾವಳಿ ವೇಳೆ ಅಂಕಣದಲ್ಲಿಯೇ ಯುವಕರ ಗುಂಪಿನ ನಡುವೆ ಜಗಳ, ವಾಗ್ವಾದ ಆರಂಭವಾಗಿದೆ. ಪಂದ್ಯ ಬಿಟ್ಟು ಯುವಕರು ಕೈಗೆ ಸಿಕ್ಕ ಬಡಿಗೆ, ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ.
ಮಾರಾಮಾರಿ ವೇಳೆ ಪಂದ್ಯಾವಳಿ ವೀಕ್ಷಣೆಗೆ ಬಂದಿದ್ದ ಜನರತ್ತಲೂ ಕಲ್ಲು ತೂರಾಟ ನಡೆದಿದೆ. ಶಾಲಾ ಆವರಣದಲ್ಲಿ ಬಿಗುವಿನ ವಾತಾವರನ ನಿರ್ಮಾಣವಾಗಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ ಎಂದು ತಿಳಿದುಬಂದಿದೆ.