ಗದಗ: ಟಿಪ್ಪು ದೇಶ ಕಂಡ ಅತ್ಯಂತ ಶ್ರೇಷ್ಠ ಅಂತಾ ನಾವು ಓದಿದ್ದೆವು. ಆದರೆ ಕನ್ನಡ ಕೊಂದಿದ್ದೇ ಟಿಪ್ಪು ಸುಲ್ತಾನ್ ಅಂತ ಈಗ ಗೊತ್ತಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಾಗ್ದಾಳಿ ನಡೆಸಿದ್ದಾರೆ.
ಟಿಪ್ಪು ಪ್ರತಿಮೆ ನಿರ್ಮಾಣ ವಿಚಾರವಾಗಿ ಶಾಸಕ ತನ್ವೀರ್ ಸೇಠ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಆಂಜನೇಯ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದು ಟಿಪ್ಪು, ಹಿಂದೂಗಳನ್ನು ಬಲವಂತದಿಂದ ಮತಾಂತರ ಮಾಡಿದ್ದ. ಮತಾಂತರ ಆಗದವರನ್ನು ಕೊಂದಿದ್ದ ಎಂಬ ಸತ್ಯ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸತ್ಯ ಹೊರಗೆ ಬರುತ್ತಿರುವುದರಿಂದ ಅನೇಕರ ಭವಿಷ್ಯಕ್ಕೆ ಕುತ್ತಾಗುತ್ತೆ ಎಂದು ಒಂದಿಷ್ಟು ರಾಜಕೀಯ ಪಕ್ಷಗಳು ಸುಳ್ಳು ಹೇಳಿ ಬದುಕುತ್ತಿವೆ. ಪ್ರತಿಮೆ ನಿರ್ಮಾಣ ಮಾಡಲಿ ಆಮೇಲೆ ಏನಾಗುತ್ತೆ ಗೊತ್ತಾಗುತ್ತೆ ಎಂದು ಎಚ್ಚರಿಕೆ ನೀಡಿದರು.