ಬೆಂಗಳೂರು: ಕತ್ತು ಕುಯ್ದುಕೊಂಡ ರೀತಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಶವ ಕಾಲೇಜು ಶೌಚಾಲಯದಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಎಎಂಪಿ ಕಾಲೇಜಿನ ವಸತಿ ನಿಲಯದ ಶೌಚಾಲಯದಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದೆ. ಕೇರಳ ಮೂಲದ ನಿತಿನ್ (19) ಮೃತ ವಿದ್ಯಾರ್ಥಿ.
ಡಿಸೆಂಬರ್ 1ರಂದು ಕಾಲೇಜು ಸೇರಿದ್ದ ನಿತಿನ್ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. ಚಾಕುವಿನಿಂದ ಚುಚ್ಚಿಕೊಂಡು ನಿತಿನ್ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.