ಶಿಗ್ಗಾಂವಿ: ಶಿಗ್ಗಾಂವಿ ಕ್ಷೇತ್ರದಿಂದ ಪ್ರಚಾರ ಆರಂಭಿಸಿದ್ದು ಖುಷಿ ತಂದಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪರವಾಗಿ ಚುನಾವಣಾ ಪ್ರಚಾರಕ್ಕೆ ಬಂದಿದ್ದೇನೆ. ಜನರ ಆದರ, ಸ್ವಾಗತ ಕಂಡು ಸಂತಸವಾಗಿದೆ ಎಂದು ನಟ ಕಿಚ್ಚ ಸುದೀಪ್ ತಿಳಿಸಿದ್ದಾರೆ.
ಶಿಗ್ಗಾಂವಿಯಲ್ಲಿ ನಡೆದ ಸಿಎಂ ಬೊಮ್ಮಾಯಿ ರೋಡ್ ಶೋನಲ್ಲಿ ಭಾಗಿಯಾದ ಬಳಿಕ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಸಿಎಂ ಬೊಮ್ಮಾಯಿ ಪರ ಮತ ಯಾಚಿಸಿದ ಕಿಚ್ಚ ಸುದೀಪ್, ಅತ್ಯಂತ ಕಡಿಮೆ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದವರು ಸಿಎಂ ಬೊಮ್ಮಾಯಿ. ಅವರಿಗೆ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು, ಜನರ ಸೇವೆ ಮಾಡಲು ಅವಕಾಶಗಳನ್ನು ನೀಡಿ ಎಂದು ಮನವಿ ಮಾಡಿದರು.
ನಾನು ಭಾರತೀಯನಾಗಿ ಪ್ರಧಾನಿ ಮೋದಿಯವರ ಕೆಲಸಗಳನ್ನು ಮೆಚ್ಚುತ್ತೇನೆ. ಸಿಎಂ ಬೊಮ್ಮಾಯಿ ಅವರು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರಿಂದ ಇನ್ನಷ್ಟು ಒಳ್ಳೆಯ ಕೆಲಸಗಳು ಆಗಬೇಕು. ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ಎಂಬ ನನ್ನ ಸಿನಿಮಾದ ಹಾಡೊಂದರ ಸಾಲಿದೆ. ಅಂತೆಯೇ ಗೆಲುವಾಗಲಿ ಎಂದು ಹೇಳಿದರು.