ಅಂತರಾಷ್ಟ್ರೀಯ ಮಾರುಕಟ್ಟೆ ಬೆಲೆಗಳಿಗನುಗುಣವಾಗಿ ಭಾರತದಲ್ಲಿ ಪೆಟ್ರೋಲ್ – ಡೀಸೆಲ್ ದರ ನಿಗದಿಯಾಗುತ್ತಿದ್ದು, ಈಗ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ಸಹ ಅದರ ಪ್ರಯೋಜನ ವಾಹನ ಸವಾರರಿಗೆ ಸಿಗುತ್ತಿಲ್ಲ.
ಅಲ್ಲದೆ ಕಳೆದ ಹಲವು ದಿನಗಳಿಂದ ಪೆಟ್ರೋಲ್ -ಡೀಸೆಲ್ ದರ ಯಥಾ ಸ್ಥಿತಿಯಲ್ಲಿ ಮುಂದುವರೆದಿದ್ದು, ಇದೀಗ ವಿಶ್ವದ ಕಚ್ಚಾ ತೈಲ ರಫ್ತುದಾರ ರಾಷ್ಟ್ರಗಳು ಹಾಗೂ ಅವುಗಳ ಮಿತ್ರ ರಾಷ್ಟ್ರಗಳ ಒಕ್ಕೂಟ (ಒಪೆಕ್ ಪ್ಲಸ್) ಕಚ್ಚಾತೈಲ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಿವೆ.
ಮೂಲಗಳ ಪ್ರಕಾರ ಮುಂದಿನ ತಿಂಗಳಿನಿಂದ ಪ್ರತಿನಿತ್ಯ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದನೆ ಕಡಿತಗೊಳ್ಳಲಿದೆ ಎನ್ನಲಾಗಿದ್ದು, ಉತ್ಪಾದನೆ ಕಡಿತಗೊಂಡರೆ ಕಚ್ಚಾ ತೈಲದ ಬೆಲೆ ಏರಿಕೆಯಾಗಲಿದೆ. ಆಗ ಭಾರತದಲ್ಲೂ ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.