ಬೆಂಗಳೂರು: ಓಲಾ, ಉಬರ್ ಕ್ಯಾಬ್ ಗಳಿಗೆ ರಾಜ್ಯ ಸಾರಿಗೆ ಇಲಾಖೆ ಕೊನೆಗೂ ದರ ನಿಗದಿ ಪಡಿಸಿದೆ. ಮಿನಿಮಮ್ ಚಾರ್ಜ್ ಜೊತೆ ಶೇ.5 ರಷ್ಟು ದರ ಫಿಕ್ಸ್ ಮಾಡಿದೆ.
ಮಿನಿಮಮ್ ಚಾರ್ಜ್ 30 ರೂಪಾಯಿ, 40 ರೂಪಾಯಿ, 60 ರೂಪಾಯಿ ಇದ್ದರೆ ಅದರ ಜೊತೆ ಶೇ.5ರಷ್ಟು ಹೆಚ್ಚುವರಿ ದರದ ಜತೆ 5% ಜಿ ಎಸ್ ಟಿ ಸೇರಿಸಲು ಸಾರಿಗೆ ಇಲಾಖೆ ಆದೇಶ ನೀಡಿದೆ.
ಈ ಬಗ್ಗೆ ಸಾರಿಗೆ ಇಲಾಖೆ ಇಂದು ಹೈಕೋರ್ಟ್ ಗೆ ವರದಿ ಸಲ್ಲಿಸಲಿದ್ದು, ಇಂದು ಹೈಕೋರ್ಟ್ ನಿಂದ ಮಹತ್ವದ ಆದೇಶ ಪ್ರಕಟವಾಗಲಿದೆ.