ನವದೆಹಲಿ : ಜಗತ್ತಿನಾದ್ಯಂತ ಓಮಿಕ್ರಾನ್ ನ ಹಾವಳಿ ಮಿತಿ ಮೀರುತ್ತಿದೆ. ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಓಮಿಕ್ರಾನ್ ವೇಗದಲ್ಲಿ ಹಬ್ಬುತ್ತಿದೆ. ಸದ್ಯ ಭಾರತಕ್ಕೂ ಇದರ ಆತಂಕ ತಟ್ಟುತ್ತಿದೆ.
ಕೋವಿಡ್-19 ಸಂಬಂಧಿತ ರಾಷ್ಟ್ರೀಯ ಸೂಪರ್ ಮಾಡಲ್ ಸಮಿತಿ ಸದ್ಯ ಎಚ್ಚರಿಕೆಯೊಂದನ್ನು ನೀಡಿದ್ದು, ಮುಂದಿನ ಫೆಬ್ರವರಿಯಲ್ಲಿ ದೇಶದಲ್ಲಿ ಕೊರೊನಾ ಮೂರನೇ ಅಲೆ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದೆ.
ಬ್ರಿಟನ್ ನಲ್ಲಿ ತೀವ್ರವಾಗಿ ಹಬ್ಬುತ್ತಿರುವ ಓಮಿಕ್ರಾನ್ ಸೋಂಕು…! ಹೆಚ್ಚಿದ ಆತಂಕ
ಕೋವಿಡ್ ಸಂಬಂಧಿತ ಸೂಪರ್ ಮಾಡಲ್ ಸಮಿತಿಯ ಮುಖ್ಯಸ್ಥ ವಿದ್ಯಾಸಾಗರ್ ಈ ಕುರಿತು ಮಾಹಿತಿ ನೀಡಿದ್ದು, ಈಗ ಜಗತ್ತಿನ ಆತಂಕಕ್ಕೆ ಕಾರಣವಾಗಿರುವ ಓಮಿಕ್ರಾನ್ ನಿಂದಾಗಿ ದೇಶದಲ್ಲಿ ಮೂರನೇ ಅಲೆ ಎದುರಾಗಬಹುದು. ಆದರೆ, ಇದರ ತೀವ್ರತೆ ಎರಡನೇ ಅಲೆಗಿಂತಲೂ ಕಡಿಮೆ ಇರಲಿದೆ ಎಂದು ಹೇಳಿದ್ದಾರೆ.
ರೋಗ ನಿರೋಧಕ ಶಕ್ತಿ ಇದ್ದರೆ ಇದರ ತೀವ್ರತೆ ಕಡಿಮೆಯಾಗಿರುತ್ತದೆ. ಒಂದು ವೇಳೆ ರೋಗ ನಿರೋಧಕ ಶಕ್ತಿ ಕುಂದಿದರೆ ಪ್ರತಿ ದಿನ 1.7 ಲಕ್ಷದಿಂದ 1.8 ಲಕ್ಷದಷ್ಟು ಜನರಲ್ಲಿ ಓಮಿಕ್ರಾನ್ ಕಾಣಿಸಬಹುದು. ಹೀಗಾಗಿ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ ಎಂದು ಹೇಳಿದ್ದಾರೆ.