ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಓಮಿಕ್ರಾನ್ ಪತ್ತೆಗೆ ಬಳಕೆ ಮಾಡುವ ಕಿಟ್ಗಳಿಗೆ ಅನುಮೋದನೆ ನೀಡಿದೆ. ಟಾಟಾ ಮೆಡಿಕಲ್ ಹಾಗೂ ಡಯಾಗ್ನೋಸ್ಟಿಕ್ಸ್ ತಯಾರಿಸಿರುವ ಈ ಕಿಟ್ಗಳಿಗೆ ಒಮಿಶ್ಯುರ್ ಎಂದು ಹೆಸರಿಡಲಾಗಿದೆ.
ಪ್ರಸ್ತುತ ದೇಶದಲ್ಲಿ ಓಮಿಕ್ರಾನ್ ನ್ನು ಪತ್ತೆ ಮಾಡಲು ಅಮೆರಿಕ ಮೂಲದ ವೈಜ್ಞಾನಿಕ ಉಪಕರಣ ತಯಾರಕ ಕಂಪನಿ ಥಮೋ ಫಿಶರ್ ತಯಾರಿಸಿದ ಕಿಟ್ಗಳನ್ನು ಬಳಕೆ ಮಾಡಲಾಗುತ್ತಿದೆ. ಇದು ಓಮಿಕ್ರಾನ್ ಪತ್ತೆ ಮಾಡಲು ಎಸ್ ಜೀನ್ ಟಾರ್ಗೆಟ್ ಫೆಲ್ಯೂರ್ ತಂತ್ರಾಜ್ಞವನ್ನು ಬಳಕೆ ಮಾಡುತ್ತದೆ.
ಅನುಮೋದನೆ ಪತ್ರದಲ್ಲಿ ಐಸಿಎಂಆರ್, ತಯಾರಕರ ಸೂಚನೆಗಳ ಪ್ರಕಾರ ಪರೀಕ್ಷೆಗಳನ್ನು ನಡೆಸಲಾಗಿದೆ. ಬ್ಯಾಚ್ ಟು ಬ್ಯಾಚ್ ಸ್ಥಿರತೆಯ ಜವಾಬ್ದಾರಿ ತಯಾರಕರ ಮೇಲೆ ಇರುತ್ತದೆ ಎಂದು ಹೇಳಿದೆ.
ಓಮಿಕ್ರಾನ್ ರೂಪಾಂತರಿಯನ್ನು ಪತ್ತೆ ಮಾಡುವುದು ವೈದ್ಯಕೀಯ ಲೋಕಕ್ಕೆ ಒಂದು ಸವಾಲಾಗಿ ಪರಿಣಮಿಸಿದ್ದ ಈ ಸಂದರ್ಭದಲ್ಲಿ ಈ ಕಿಟ್ ಖಂಡಿತವಾಗಿಯೂ ಒಂದು ವರದಾನವಾಗಿದೆ.
ಒಮಿಶ್ಯೂರ್ ಆರ್ಟಿ ಪಿಸಿಆರ್ ಕಿಟ್ನ ಮುಂದುವರಿದ ಪರೀಕ್ಷೆಗಳಿಗಾಗಿ ಐಸಿಎಂಆರ್ಗೆ ಕಳುಹಿಸಿಕೊಡಲಾಗಿತ್ತು. ಇದು ಭಾರತದಲ್ಲಿ ಅನುಮೋದನೆ ಪಡೆದ ಮೊದಲ ಓಮಿಕ್ರಾನ್ ರೂಪಾಂತರಿ ಪತ್ತೆ ಮಾಡುವ ಆರ್ಟಿ ಪಿಸಿಆರ್ ಕಿಟ್ ಆಗಿದೆ.