ಬೆಂಗಳೂರು: ಕೊರೊನಾ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕಿತರ ಡಿಸ್ಚಾರ್ಜ್ ಬಗ್ಗೆ ಕ್ಲಿನಿಕಲ್ ಎಕ್ಸ್ ಪರ್ಟ್ ಕಮಿಟಿಯಿಂದ ಮಾರ್ಗಸೂಚಿ ಪ್ರಕಟವಾಗಿದೆ.
ಒಮಿಕ್ರಾನ್ ಸೋಂಕಿನ ಲಕ್ಷಣವಿಲ್ಲದಿದ್ದರೆ 10 ದಿನಕ್ಕೆ ಡಿಸ್ಚಾರ್ಜ್ ಮಾಡಬಹುದು. ಆದರೆ ಕೆಲ ಅಂಶಗಳನ್ನು ಪರಿಗಣಿಸುವುದು ಮುಖ್ಯ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
* ಕೊನೇ ಮೂರು ದಿನಗಳಲ್ಲಿ ಜ್ವರ ಲಕ್ಷಣವಿಲ್ಲದಿದ್ದರೆ ಡಿಸ್ಚಾರ್ಜ್ ಮಾಡಬಹುದು.
* ಕೊನೇ 4 ದಿನದಲ್ಲಿ ಆಕ್ಸಿಜನ್ ಲೆವಲ್ ಶೇ.95ರಷ್ಟಿದ್ದರೆ ಡಿಸ್ಚಾರ್ಜ್
* 2 ಬಾರಿ ಆರ್ ಟಿಪಿಸಿಆರ್ ಟೆಸ್ಟ್ ಮಾಡಿ ನೆಗೆಟಿವ್ ಇದ್ದರೆ ಡಿಸ್ಚಾರ್ಜ್
* RTPCR ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ 48 ಗಂಟೆಗಳ ಬಳಿಕ ಮತ್ತೊಮ್ಮೆ ಟೆಸ್ಟ್
* ಡಿಸ್ಚಾರ್ಜ್ ಆದ ವ್ಯಕ್ತಿಗೆ ಹೋಂ ಕ್ವಾರಂಟೈನ್ ಅಥವಾ ಸೆಲ್ಫ್ ಕ್ವಾರಂಟೈನ್
* ಕ್ವಾರಂಟೈನ್ ಆಗಿರುವ ವ್ಯಕಿಗೆ ಮತ್ತೆ 6ನೇ ದಿನಕ್ಕೆ RTPCR ಟೆಸ್ಟ್