ಹಾವೇರಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಬೆಂಜ್ ಕಾರ್ ಗಿರಾಕಿಗಳಿಂದ ಅಭಿವೃದ್ಧಿ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಉಪಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಹಾಗೂ ಡಿಕೆಶಿಯವರದ್ದು ಅದೆಂಥ ನಾಟಕ? ಒಮ್ಮೆ ಸೈಕಲ್ ನಲ್ಲಿ ಬರುತ್ತಾರೆ, ಮತ್ತೊಮ್ಮೆ ಎತ್ತಿನ ಗಾಡಿಯಲ್ಲಿ ಬರುತ್ತಾರೆ. ಒಬ್ಬರ ಕೈಯಲ್ಲಿ ಬಾರುಕೋಲು, ಮತ್ತೊಬ್ಬರ ಕೈಯಲ್ಲಿ ಹಗ್ಗ…ಇವರೆಲ್ಲ ಬೆಂಜ್ ಕಾರ್ ಗಿರಾಕಿಗಳು. ನಿನ್ನೆ ಸಿದ್ದರಾಮಯ್ಯ ಬೆಂಜ್ ಕಾರಿನಲ್ಲಿ ಪ್ರಚಾರಕ್ಕೆ ಬಂದಿದ್ದಾರೆ. ಬೆಂಜ್ ಕಾರಿನಲ್ಲಿ ಓಡಾಡುವ ನಾಯಕರಿಂದ ಅಭಿವೃದ್ಧಿ ಸಾಧ್ಯವೇ ಎಂದು ವಾಗ್ದಾಳಿ ನಡೆಸಿದ್ದಾರೆ.
RSS ಕೋಮುವಾದಿ ಸಂಘಟನೆ; ಸಂಘ ಪರಿವಾರದ ವಿರುದ್ಧ ಮತ್ತೆ ಕಿಡಿಕಾರಿದ ಸಿದ್ದರಾಮಯ್ಯ
ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಯಾರ ವಿರುದ್ಧ ಕಾಂಗ್ರೆಸ್ ಆರೋಪಗಳನ್ನು ಮಾಡಲ್ಲ? ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ ಇದ್ದಂತೆ. ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ನಲ್ಲಿ ಅಚ್ಚೇ ದಿನ್ ಬರಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಲ್ಲಿ ಪಿಸು ಮಾತು ಯಾಕೆ ಆರಂಭವಾಗಿದೆ ಗೊತ್ತಾ? ಎಂದು ಪ್ರಶ್ನಿಸಿದ ಬೊಮ್ಮಾಯಿ, ಸೋನಿಯಾ ಗಾಂಧಿ ದೆಹಲಿಗೆ ಬರುವಂತೆ ಸಿದ್ದರಾಮಯ್ಯನವರಿಗೆ ಹೇಳಿದರು. ಆದರೆ ಇಲ್ಲೇ ಸ್ಥಾನ ಗಟ್ಟಿ ಮಾಡಿಕೊಳ್ಳಲು ಸಿದ್ದರಾಮಯ್ಯ ಪಿಸು ಮಾತು ಶುರುಮಾಡಿದ್ದಾರೆ ಎಂದು ಹೇಳುವ ಮೂಲಕ ಡಿಕೆಶಿ ವಿರುದ್ಧ ಸಲೀಂ ಹಾಗೂ ಉಗ್ರಪ್ಪ ಅವರ ಹೇಳಿಕೆಗಳನ್ನು ಪ್ರಸ್ತಾಪಿಸಿದರು. ಕಾಂಗ್ರೆಸ್ ಮುಗಿಸಲು ಬೇರೆ ಯಾರೂ ಬೇಕಾಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿರುವವರೇ ಸಾಕು ಎಂದು ಟೀಕಿಸಿದ್ದಾರೆ.
ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಬಿಜೆಪಿಯಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲು ಬಿಡಲ್ಲ, ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ. ಸಿ.ಎಂ.ಉದಾಸಿ ನಾಲ್ಕು ದಶಕಗಳ ಕಾಲ ಹಾನಗಲ್ ಪ್ರತಿನಿಧಿಸಿದ್ದರು. ಅವರಿಗೆ ಸಾಟಿ ಬೇರೆ ಯಾರೂ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಈ ಕ್ಷೇತ್ರವನ್ನೂ ಪೂರ್ಣವಾಗಿ ನೋಡಿಲ್ಲ, ನಿನ್ನೆ ಮೊನ್ನೆ ಬಂದು ದೊಡ್ಡ ಸಾಧನೆ ಮಾಡಿದಂತೆ ಹೇಳುತ್ತಿದ್ದಾರೆ. ಕ್ಷೇತ್ರದ ಜನರ ಬಳಿ ಬಂದು ಮತ ಕೇಳುತ್ತಿದ್ದಾರೆ ಇಂತವರನ್ನು ಎಷ್ಟು ನೋಡಿಲ್ಲ ಹೇಳಿ? ಕೋವಿಡ್ ಸಂದರ್ಭದಲ್ಲಿ ಬಿಎಸ್ ವೈ ಉತ್ತಮ ಆಡಳಿತ ನೀಡಿದರು. ನೂರಾರು ಜನರ ಪ್ರಾಣ ಉಳಿಸಿದ್ದು ಬಿಜೆಪಿ. ಈ ಕ್ಷೇತ್ರದಲ್ಲಿ 20 ಸಾವಿರ ಫುಡ್ ಕಿಟ್ ಕೊಟ್ಟಿದ್ದೇವೆ. ಬಿಜೆಪಿ ಶಾಶ್ವತವಾಗಿ ಜನರ ಜೊತೆಗೆ ಇರುತ್ತೆ ಎಂದು ಹೇಳಿದರು.