ಮೈಸೂರು: ಲಿಂಗಾಯಿತ ಸಮುದಾಯಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷಮೆ ಕೇಳಿದ ವಿಚಾರವಾಗಿ ಮಾತನಾಡಿದ ಸಚಿವ ವಿ. ಸೋಮಣ್ಣ, ಒಡೆದ ಮೊಸರು ಯಾವತ್ತೂ ಸರಿಯಾಗಲ್ಲ ಎಂದು ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ವಿ. ಸೋಮಣ್ಣ, ಸದ್ಯ ಸಿದ್ದರಾಮಯ್ಯನವರಿಗೆ ಚುನಾವಣೆ ವೇಳೆ ಅರಿವಾಗಿದೆ. ಚುನಾವಣೆಗಾಗಿ ಬದಲಾಗಿದ್ದಾರೆ. ಚುನಾವಣೆ ನಂತರ ಸಿದ್ದರಾಮಯ್ಯ ಮತ್ತೆ ಅದೇ ರೀತಿ ಆಗ್ತಾರೆ ಎಂದು ವಾಗ್ದಾಳಿ ನಡೆಸಿದರು.
ವಸತಿ ಸಚಿವರಾಗಿ ಸೋಮಣ್ಣ ವರುಣಾ ಕ್ಷೇತ್ರದ ಜನರಿಗೆ ಮನೆ ಕೊಟ್ಟಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಸಿದ್ದರಾಮಯ್ಯ ಅದೃಷ್ಟದ ರಾಜಕಾರಣಿ. ಅದೃಷ್ಟ ಇದೆ ಎಂದು ಬಂಡೆಗೆ ತಲೆ ಜಜ್ಜಿಕೊಳ್ಳುತ್ತಿದ್ದೀರಿ. ಈಗ ನಿಮಗೆ ಕಾಲ ಬಂದಿದೆ. ಇನ್ನೊಬ್ಬರ ಕೆಲಸ ಗೌರವಿಸಿ. ಅದು ಕಾಮನ್ ಸೆನ್ಸ್ ನಾಯಕತ್ವದ ಗುಣ ಲಕ್ಷಣ ಎಂದು ಗುಡುಗಿದ್ದಾರೆ.