ಬೆಂಗಳೂರು: ಒಂದೇ ಹುದ್ದೆಗೆ ನಾಲ್ವರ ಹೆಸರನ್ನು ಶಿಫಾರಸು ಮಾಡಿ ಸಿಎಂ ಆದೆಶ ಹೊರಡಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಲೆಕ್ಕಾಧಿಕಾರಿ ಹುದ್ದೆಗೆ ನಾಲ್ವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆ ಲೆಕ್ಕಾಧಿಕಾರಿ ಹುದ್ದೆಯಲ್ಲಿ ಎಂ. ಮಂಜುನಾಥ್ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಈ ಹುದ್ದೆಗೆ ಎಸ್.ಕೆ. ಜಗದೀಶ್, ಕೆ.ಹೆಚ್. ಶ್ರೀನಿವಾಸ್, ಎಂ. ನಾಗರಾಜು ಹಾಗೂ ಎಂ.ಎಸ್. ಪ್ರತಿಭಾ ಅವರ ಹೆಸರನ್ನು ಶಿಫಾರಸು ಮಾಡಿ ಆದೇಶ ಹೊರಡಿಸಲಾಗಿದೆ. ಇದು ಸಿಎಂ ಕಚೇರಿಯಲ್ಲಿಯೇ ವರ್ಗಾವಣೆ ದಂಧೆಗೆ ಕುಮ್ಮಕು ನೀಡಲಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಇನ್ನಷ್ಟು ಆಹಾರವಾಗುವಂತೆ ಮಾಡಿದೆ.