ಬೆಂಗಳೂರು: ಒಂದೇ ನೋಂದಣಿ ಸಂಖ್ಯೆಯನ್ನು ಬಳಸಿ ಸಂಚರಿಸುತ್ತಿದ್ದ ಎರಡು ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ರಾಜ್ ಕುಮಾರ್ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, KA 53 B 3633 ನೋಂದಣಿ ಸಂಖ್ಯೆಯಲ್ಲಿ ಯಲಹಂಕದಲ್ಲಿ ಸಂಚರಿಸುತ್ತಿದ್ದ ಒಂದು ಸ್ವರಾಜ್ ಮಜ್ದಾ ಬಸ್ಸನ್ನು ವಶಪಡಿಸಿಕೊಂಡಿದೆ.
6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಖಾಸಗಿ ಅಂಗಕ್ಕೆ ಮೆಣಸು ತುಂಬಿದ ಪಾಪಿ
ಬಳಿಕ ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಅದೇ ನೋಂದಣಿ ಸಂಖ್ಯೆಯನ್ನು ಬಳಸಿ ಸಂಚರಿಸುತ್ತಿದ್ದ ಇನ್ನೊಂದು ಸ್ವರಾಜ್ ಮಜ್ದಾ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಒಂದೇ ನೋಂದಣಿ ಸಂಖ್ಯೆ ಬಳಸಿ ವಾಹನಗಳನ್ನು ಚಲಾಯಿಸುವುದು ಕಾನೂನಿಗೆ ವಿರುದ್ದವಾಗಿದ್ದು, ಈ ಬಗ್ಗೆ ದೂರನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ರಾಜ್ ಕುಮಾರ್ ತಿಳಿಸಿದ್ದಾರೆ.