ಮಂಗಳೂರು: ಮಂಗಳೂರಿನಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಮತಾಂತರ ಯತ್ನವೇ ಕಾರಣ ಎಂಬ ಆಘಾತಕಾರಿ ಅಂಶ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಈ ಕುರಿತು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದು, ನಾಗೇಶ್ ಹಾಗೂ ಕುಟುಂಬದ ನಾಲ್ವರು ಆತ್ಮಹತ್ಯೆ ಪ್ರಕರಣಕ್ಕೆ ಮತಾಂತರಕ್ಕೆ ಒತ್ತಾಯಿಸಿದ್ದು ಕಾರಣ ಎಂಬುದು ತಿಳಿದುಬಂದಿದೆ. ಆರೋಪಿ ನೂರ್ ಜಹಾನ್ ಎಂಬ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಸತ್ಯ ಬಯಲಾಗಿದೆ ಎಂದರು.
ಅಮೆಜಾನ್ ಪ್ರೈಮ್ ಸದಸ್ಯತ್ವಕ್ಕೆ ಬೆಲೆ ಏರಿಕೆ ಶಾಕ್…! ಹಳೆ ಬೆಲೆಯಲ್ಲೇ ಸದಸ್ಯತ್ವ ಪಡೆಯಲು ನೀವು ಮಾಡಬೇಕಾಗಿದ್ದೇನು….?
ಬಾಗಲಕೋಟೆಯಿಂದ ಮಂಗಳೂರಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಾಗೇಶ್ ಹಾಗೂ ಆತನ ಪತ್ನಿ ವಿಜಯಲಕ್ಷ್ಮಿ ಹಾಗೂ ಇಬ್ಬರು ಮಕ್ಕಳು ಸೇರಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್ ಕೂಡ ಪತ್ತೆಯಾಗಿತ್ತು. ಅಲ್ಲದೇ ಮೃತ ನಾಗೇಶ್ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಟ್ಟಿದ್ದ ಮೆಸೆಜ್ ಕೂಡ ಪೊಲೀಸರಿಗೆ ಸಿಕ್ಕಿತ್ತು.
ಡೆತ್ ನೋಟ್ ನಲ್ಲಿ ಪತ್ನಿ ವಿಜಯಲಕ್ಷ್ಮಿ, ನೂರ್ ಜಹಾನ್ ಎಂಬ ಮಹಿಳೆ ಮನೆಗೆ ಕೆಲಸಕ್ಕೆ ಹೋಗುತ್ತಿದ್ದು, ನೂರ್ ಜಹಾನ್ ಪತ್ನಿಯನ್ನು ಮತಾಂತರಕ್ಕೆ ಯತ್ನಿಸಿ ಮುಸ್ಲೀಂ ಹುಡುಗನೊಂದಿಗೆ ಮದುವೆಗಾಗಿ ಹುಡುಗನನ್ನು ಹುಡುಕಾಡುತ್ತಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಬೇಸತ್ತು ಪತ್ನಿ ಹಾಗೂ ಮಕ್ಕಳನ್ನು ಹತ್ಯೆಗೈದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ನಾಗೇಶ್ ಬರೆದಿಟ್ಟಿದ್ದ.
ಪ್ರಕರಣ ಸಂಬಂಧ ನೂರ್ ಜಹಾನ್ ಳನ್ನು ಬಂಧಿಸಲಾಗಿದ್ದು, ಆಕೆ ಮದುವೆ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದಳು. ವಿಜಯಲಕ್ಷ್ಮಿ ಹಾಗೂ ಆಕೆ ಪತಿ ನಾಗೇಶ್ ನಡುವಿನ ಮನಸ್ತಾಪ, ಜಗಳವನ್ನು ಬಂಡವಾಳ ಮಾಡಿಕೊಂಡು ವಿಜಯಲಕ್ಷ್ಮಿಗೆ ಡಿವೋರ್ಸ್ ಕೊಡಿಸಲು ಸಿದ್ಧತೆ ನಡೆಸಿ, ಮತಾಂತರಕ್ಕೆ ಯತ್ನಿಸಿದ್ದಳು ಎಂದು ತಿಳಿದುಬಂದಿದೆ ಎಂದಿದ್ದಾರೆ.