alex Certify BIG NEWS: ಒಂದೂವರೆ ವರ್ಷಗಳ ಹಿಂದೆಯೇ ಶಂಕಿತ ಉಗ್ರರ ಕುರಿತು ಸಿಕ್ಕಿತ್ತು ಸುಳಿವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಂದೂವರೆ ವರ್ಷಗಳ ಹಿಂದೆಯೇ ಶಂಕಿತ ಉಗ್ರರ ಕುರಿತು ಸಿಕ್ಕಿತ್ತು ಸುಳಿವು…!

ಸಾವರ್ಕರ್ ಫ್ಲೆಕ್ಸ್ ವಿವಾದ ಸಂದರ್ಭದಲ್ಲಿ ಪ್ರೇಮ್ ಸಿಂಗ್ ಎಂಬಾತನಿಗೆ ಶಿವಮೊಗ್ಗದಲ್ಲಿ ಚಾಕು ಇರಿದ ದುಷ್ಕರ್ಮಿ ಜಬೀವುಲ್ಲಾ ಎಂಬಾತನನ್ನು ಪೊಲೀಸರು ಬಂಧಿಸಿದ ಬಳಿಕ ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ಸಂಪರ್ಕ ಹೊಂದಿರುವವರ ಮಾಹಿತಿ ಸಿಕ್ಕಿದೆ.

ಇದೀಗ ಶಂಕಿತ ಉಗ್ರರಾದ ಮಾಜ್ ಮುನೀರ್ ಅಹಮದ್ ಹಾಗೂ ಸಯ್ಯದ್ ಯಾಸಿನ್ ಎಂಬವರನ್ನು ಪೊಲೀಸರು ಬಂಧಿಸಿದ್ದು, ಇವರುಗಳ ವಿಚಾರಣೆ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ.

ಆಶ್ಚರ್ಯಕರ ಸಂಗತಿ ಎಂದರೆ ಒಂದೂವರೆ ವರ್ಷಗಳ ಹಿಂದೆಯೇ ಉಗ್ರರ ಪರ ಬರೆದಿದ್ದ ಗೋಡೆ ಬರಹ ಒಂದರ ಹಿನ್ನೆಲೆಯಲ್ಲಿ ಓರ್ವ ಬಂಧನಕ್ಕೊಳಗಾಗಿದ್ದು, ಆ ಸಂದರ್ಭದಲ್ಲಿಯೇ ಉಗ್ರ ಸಂಘಟನೆಗಳ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿತ್ತು.

2020ರ ನವೆಂಬರ್ ನಲ್ಲಿ ಮಂಗಳೂರು ನಗರದ ಬಿಜೈ ಮತ್ತು ಜಿಲ್ಲಾ ಕೋರ್ಟ್ ಸಮೀಪ ಇವರು ಬರೆದಿದ್ದ ಗೋಡೆ ಬರಹ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತಲ್ಲದೆ ಪ್ರಕರಣ ದಾಖಲಿಸಿ ಬಂಧನ ಮಾಡಲಾಗಿತ್ತು. ಜಾಮೀನು ಸಿಕ್ಕಬಳಿಕ ಮತ್ತೆ ಉಗ್ರ ಪರ ತಮ್ಮ ಚಟುವಟಿಕೆಯನ್ನು ಮುಂದುವರಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...