ಬೆಂಗಳೂರು: ಸ್ಯಾಂಟ್ರೋ ರವಿ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವವರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತಾನಡಿದ ಸಚಿವರು, ಯಾರನ್ನು ಬೇಕಾದರೂ ಕೇಳಿ, ನಾನು ಎಲ್ಲರಿಗೂ ಸಿಗುತ್ತೇನೆ. ಒಂದು ಫೋಟೋಗೆ ಇಷ್ಟು ಕಥೆ ಕಟ್ಟಿದರೆ ಹೇಗೆ? ಸಾರ್ವಜನಿಕ ಜೀವನದಲ್ಲಿ, ರಾಜಕೀಯವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದೇನೆ. ಈ ರೀತಿ ಕೆಸರು ಎರಚಿದರೆ ತುಂಬಾ ನೋವಾಗುತ್ತದೆ ಎಂದು ಭಾವುಕರಾದರು.
ಇಂತದ್ದೇ ಬ್ಯುಸಿನೆಸ್ ಮಾಡುವವರಿಗೆ ಏನೂ ಸಮಸ್ಯೆ ಅನಿಸಲ್ಲ, ಆದರೆ ನಮ್ಮಂತವರಿಗೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.