ಮಂಡ್ಯ: ಕಲಾಪದಲ್ಲಿ ಯಾವ ವಿಷಯಗಳಿಗೆ ಪ್ರಾತಿನಿಧ್ಯ ಕೊಡಬೇಕೋ ಕೊಡುತ್ತಿಲ್ಲ. ಒಂದು ಸಚಿವ ಸ್ಥಾನದ ರಾಜೀನಾಮೆಗಾಗಿ ಇಡೀ ಕಲಾಪವನ್ನೇ ಹಾಳು ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಧರಣಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅವರವರ ವೈಯಕ್ತಿಕ ಪ್ರತಿಷ್ಠೆಗೆ ಕಲಾಪ ಹಾಳಾಗುತ್ತಿದೆ. ಕಲಾಪ ನಡೆಸಲು ದಿನಕ್ಕೆ 2 ಕೋಟಿ ಖರ್ಚಾಗುತ್ತದೆ. ಆದರೆ ಅನಗತ್ಯವಾಗಿ ಕಾಂಗ್ರೆಸ್ ನವರು ಕಲಾಪ ಹಾಳು ಮಾಡುತ್ತಿದ್ದಾರೆ. ಒಬ್ಬ ಮಂತ್ರಿ ಸ್ಥಾನದ ವಿಚಾರ ಇಟ್ಟುಕೊಂಡು ಗದ್ದಲ ಮಾಡುತ್ತಿದ್ದಾರೆ. ನಾವು ಜನರ ಬದುಕು ಕಟ್ಟಿಕೊಡಬೇಕು ಹೊರತು ಪ್ರತಿಷ್ಠೆಗಾಗಿ ಕಲಾಪವನ್ನೇ ಹಾಳು ಮಾಡುತ್ತಿರುವುದು ಎಷ್ಟು ಸರಿ ? ಇಂಥವರ ಬಗ್ಗೆ ಜನ ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.
ಅಂಗಡಿಗಳಲ್ಲಿ ನಿಂಬೆಹಣ್ಣು – ಮೆಣಸಿನಕಾಯಿ ಕಟ್ಟುವುದರ ಹಿಂದಿದೆ ಈ ʼನಂಬಿಕೆʼ
ಇದೇ ವೇಳೆ ಹಿಜಾಬ್ ವಿವಾದ ವಿಚಾರವಾಗಿಯೂ ಮಾತನಾಡಿದ ಕುಮಾರಸ್ವಾಮಿ, ನಾನು ಯಾವುದೇ ಹಿಜಾಬ್ ಪಜಾಬ್ ಜತೆಯೂ ಇಲ್ಲ. ನಮಗೆ ನಾಡಿನ ಜನತೆ ಬದುಕು ಮುಖ್ಯ. ಶಾಂತಿ ವಾತಾವರಣ ಹಾಳುಮಾಡಬಾರದು. ಯಾವುದೇ ಜಾತಿ, ಧರ್ಮದ ಜನರಿರಲಿ ಜನರ ಬದುಕು ಮುಖ್ಯ ಎಂದು ಹೇಳಿದರು.