ಬೆಂಗಳೂರು: ಗ್ಯಾರಂಟಿ ವಂಚನೆಗಳನ್ನು ಮುಂದಿಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಗೆ ಇರುವುದು ಸ್ವಾರ್ಥ ಚಿಂತನೆ ಮಾತ್ರ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಇರುವುದು ಎರಡೇ ಅಧಿಕಾರ ದಾಹ ಹಾಗೂ ಅಭದ್ರತಾ ಭಾವ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಒಂದು ತಿಂಗಳಲ್ಲೇ ಬೀದಿಗೆ ಬಂತು ಗದ್ದುಗೆಗಾಗಿ ಎಟಿಎಂ ಸರ್ಕಾರದ ಗುದ್ದಾಟ. ಅಧಿಕಾರ ಹಂಚಿಕೆ ವಿಚಾರವಾಗಿ ಸಚಿವರುಗಳೇ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಟಾಂಗ್ ನೀಡಿದೆ.
ಎಂ.ಬಿ. ಪಾಟೀಲ್ – ಸಿದ್ದರಾಮಯ್ಯನವರೇ 5 ವರ್ಷ ಮುಖ್ಯಮಂತ್ರಿ, ಡಿ.ಕೆ. ಸುರೇಶ್ – ಎಂ.ಬಿ.ಪಾಟೀಲ್ ಹೇಳಿಕೆಗೆ ಹೆಚ್ಚಿನ ಮಾಹಿತಿ ಬೇಕಾದರೇ ಸುರ್ಜೇವಾಲಾರನ್ನೆ ಕೇಳಿ. ಹೆಚ್.ಸಿ. ಮಹದೇವಪ್ಪ- ಸಿದ್ದರಾಮಯ್ಯನವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯನವರೇ ಸಿಎಂ ಬದಲಾವಣೆ ಎಂಬುದು ಮಾಧ್ಯಮಗಳ ಸೃಷ್ಟಿಯೇ ? ಮಾಧ್ಯಮ ಎಂದರೆ ಯಾರು ಸ್ವಾಮಿ ? ಹೆಚ್.ಸಿ. ಮಹದೇವಪ್ಪನವರೇ ? ಅಥವಾ ಸತೀಶ್ ಜಾರಕಿಹೊಳಿಯವರೇ ? ಸಚಿವರಾದ ಎಂ.ಬಿ. ಪಾಟೀಲ್ ಅವರಾ? ಅಥವಾ ಕೆ.ಎನ್.ರಾಜಣ್ಣ ಅವರಾ? ಎಂದು ಸರಣಿ ಟ್ವೀಟ್ ಮುಲಕ ಬಿಜೆಪಿ ಪ್ರಶ್ನಿಸಿದೆ.